ಮಂಗಳೂರು: ಮಂಗಳೂರಿನ ಅಶೋಕನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆದ 'ಅಶೋಕನಗರ ಪ್ರೀಮಿಯರ್ ಲೀಗ್' (ಎಪಿಎಲ್) ಪಂದ್ಯಾವಳಿಯಲ್ಲಿ ತ್ರಿಶೂಲ್ ನಾಯಕತ್ವದ ತಂಡವು ಚಾಂಪಿಯನ್ ಆಗಿ ಮೂಡಿ ಬಂದಿದೆ.
ಭಾನುವಾರ ಸಂಜೆ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ತ್ರಿಶೂಲ್ ತಂಡವು, ವಜ್ರೇಶ್ ನಾಯಕತ್ವದ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಸಂದರ್ಭ ನಾನಾ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಯಿತು. ಮಕ್ಕಳ ಕ್ರಿಕೆಟ್ ಪ್ರತಿಭೆ, ನಾಯಕತ್ವದ ಗುಣವನ್ನು ಒರೆಗೆ ಹಚ್ಚಲು ಆಯೋಜಿಸಿದ ಈ ಜೂನಿಯರ್ ಕ್ರಿಕೆಟ್ ಟೂರ್ನಮೆಂಟ್ ನ ಕ್ರೀಡಾಪ್ರೇಮಿ ಸಂಘಟಕರ ಆಸಕ್ತಿ, ಪರಿಶ್ರಮವನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Kshetra Samachara
15/02/2021 11:43 am