ಮಂಗಳೂರು: ಕರಾವಳಿಯ ಐತಿಹಾಸಿಕ ಹಿರಿಮೆಯ ಕಾರಣಿಕ ಕ್ಷೇತ್ರ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಚಂಡಿಕಾ ಯಾಗ ಜರುಗಿತು.
ಬೆಳಗ್ಗೆ 6 ಗಂಟೆಗೆ ಕೋಡಿಕಲ್ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ಶ್ರೀ ಚಂಡಿಕಾ ಯಾಗ ಆರಂಭಗೊಂಡು, 10.30ಕ್ಕೆ ಪೂರ್ಣಾಹುತಿ ನಡೆಯಿತು.
11 ಗಂಟೆಗೆ ಧಾರ್ಮಿಕ ಸಭೆ ನಡೆದ ಬಳಿಕ ಮಧ್ಯಾಹ್ನ 12.30 ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ ಜರುಗಿತು. ಅನಂತರ ಮಹಾ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಭಜನೆ ಹಾಗೂ ಭಕ್ತಿ ಗಾನ ಸುಧೆ ಸಂಗೀತ ಕಾರ್ಯಕ್ರಮ ನೆರೆದ ಸಾವಿರಾರು ಭಕ್ತಾದಿಗಳಿಗೆ ರಸದೌತಣ ನೀಡಿತು.
ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ ಜರುಗಿತು.
Kshetra Samachara
27/02/2021 09:30 am