ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀ ವೀರ ವೆಂಕಟೇಶ ದೇವರ ಪುನಃ ಪ್ರತಿಷ್ಠಾ ವರ್ಧಂತ್ಯುತ್ಸವ; ಪಂಚಾಮೃತ, ಶತಕಲಶಾಭಿಷೇಕ

ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್ ನಿರ್ಮಾಣ ಹಾಗೂ ಶ್ರೀ ವೀರ ವೆಂಕಟೇಶ ದೇವರ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಇಂದು ದೇವರಿಗೆ ಪಂಚಾಮೃತ, ಶತಕಲಶಾಭಿಷೇಕ ನೆರವೇರಿತು.

ಪ್ರಧಾನ ದೇವರ ಪ್ರೀತ್ಯರ್ಥ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಪಂಚಾಮೃತ, ಶತಕಲಶಾಭಿಷೇಕ ಜರುಗಿತು.

ಬಳಿಕ ನೆರೆದ ಸಮಾಜ ಬಾಂಧವರಿಗೆ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ದೇವರಿಗೆ ಸ್ವರ್ಣ ಗರುಡೋತ್ಸವ ಸೇವೆ ನೆರವೇರಿತು.

Edited By : Nagaraj Tulugeri
Kshetra Samachara

Kshetra Samachara

05/02/2021 08:16 pm

Cinque Terre

2.75 K

Cinque Terre

0

ಸಂಬಂಧಿತ ಸುದ್ದಿ