ಬಂಟ್ವಾಳ: ಬಂಟ್ವಾಳ ತಾಲೂಕಿನ ಜನಪ್ರಿಯ ಪ್ರವಾಸಿ ಕ್ಷೇತ್ರ ಹಾಗೂ ಧಾರ್ಮಿಕ ಸನ್ನಿಧಿಯಾಗಿರುವ ನರಹರಿ ಪರ್ವತದಲ್ಲಿರುವ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಮತ್ತು ತೀರ್ಥಸ್ನಾನ ಕಾರ್ಯಕ್ರಮಗಳು ಇರಲಿವೆ.
ಈ ಬಾರಿ ಡಿ.13ರಂದು ರಾತ್ರಿ ಲಕ್ಷದೀಪೋತ್ಸವ ಹಾಗೂ ಡಿ.14ರಂದು ತೀರ್ಥಸ್ನಾನ ಉತ್ಸವಗಳು ನಡೆಯಲಿವೆ. ಆದರೆ ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿ ಅನುಸರಿಸಲಾಗುತ್ತದೆ. ಇದಕ್ಕೆ ಭಕ್ತರು ಸಹಕರಿಸಬೇಕು ಎಂದು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆಸ.
Kshetra Samachara
06/12/2020 11:55 am