ಮುಲ್ಕಿ: ಗ್ರಾಮೀಣ ಪ್ರದೇಶದ ಜನರಿಗೆ ನಗರದಲ್ಲಿ ಲಭ್ಯವಾಗುವ ಸೂಕ್ತ ಆರೋಗ್ಯ ಸೌಲಭ್ಯವನ್ನುತಲುಪಿಸುವುದು ಸೇವಾ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದ್ದು ಸೌಲಭ್ಯಗಳ ಪ್ರಯೋಜನವನ್ನು ಜನರು ಪಡೆದಲ್ಲಿ ಸೇವೆಯ ಸಾರ್ಥಕತೆ ಮೂಡುತ್ತದೆ ಎಂದು ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ಮೂಲ್ಕಿ, ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಸಹಯೋಗದಲ್ಲಿ ಜರಗಿದ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ ಹಾಗೂ ಸಕ್ಕರೆ ಖಾಯಿಲೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಅಧ್ಯಕ್ಷೆ ನೀರಜಾಕ್ಷಿ ಅಗರವಾಲ್ ವಹಿಸಿದ್ದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್ ಶುಭಾಶಂಸನೆಗೈದರು.ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ನೇತ್ರ ತಜ್ಷ ಡಾ. ಪುನೀತ್ ಹೆಗ್ಡೆ ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಮುಲ್ಕಿ ಕಾರ್ಯದರ್ಶಿ ಶೀತಲ್ ಸುಶೀಲ್,ಲಿಯೋ ಡಿಸ್ಟ್ರಿಕ್ಟ್ ಅಧ್ಯಕ್ಷ ಕವನ್ ಕುಬೆವೂರು, ಲಿಯೋ ಅಧ್ಯಕ್ಷ ಪ್ರಯೂಶ್ ಸುವರ್ಣ,ಲಯನ್ಸ್ ಜಿಲ್ಲಾ ಸಮಿತಿಯ ರಮೇಶ್ ರಾಥೋಡ್,ಮೂಲ್ಕಿ ನ. ಪಂ.ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ, ಶಮಂತ್ ಕುಮಾರ್, ಮುಲ್ಕಿಬಿಲ್ಲವ ಸಮಾಜ ಸೇವಾ ಸಂಘದ ಕೋಶಾಕಾರಿ ಪ್ರಕಾಶ ಸುವರ್ಣ, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ ಉಪಸ್ಥಿತರಿದ್ದರು.
Kshetra Samachara
19/09/2022 11:29 am