ಮುಲ್ಕಿ: ಇಲ್ಲಿಗೆ ಸಮೀಪದ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ :"ಸೇವಾನಿಧಿ ಪುನರೂರು" ಸಂಘಟನೆಯ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಸುರೇಶ್ ರಾವ್ ನೀರಳಿಕೆ ಮಾತನಾಡಿ ವಿದ್ಯಾನಿಧಿಯ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಅಭಿನಂದನಿಯ ಎಂದರು. ಕಾರ್ಯಕ್ರಮದಲ್ಲಿ ಸೇವಾನಿಧಿಯ "ವಿದ್ಯಾ ನಿಧಿ"ಯ ಸಹಾಯ ಹಸ್ತವನ್ನು ಶಾರದಾ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ದಿಶಾನ್ ಗೊಳಿಜೋರ ರವರಿಗೆ ನೀಡಲಾಯಿತು. ಈ ಸಂದರ್ಭ ರವಿ ಶೆಟ್ಟಿ ಪುನರೂರು ಗುತ್ತು, ಅಧ್ಯಕ್ಷ ಪ್ರಶಾಂತ್ ಪುನರೂರು ಹಾಗೂ ಸೇವಾನಿಧಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
11/09/2022 02:49 pm