ಮುಲ್ಕಿ: ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಮೋಡಲಿಂಗ್, ರಕ್ತದಾನ ಸಹಿತ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದ ಸಾಧಕಿ ಪ್ರತಿಭಾ ಪೂಜಾರಿರವರನ್ನು ಗೌರವಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿ ಪ್ರತಿಭಾ ಪೂಜಾರಿ ಮಾತನಾಡಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದೆ ಬಂದು ತಮ್ಮ ಕಾಲಿನಲ್ಲಿ ತಾವು ನಿಂತುಕೊಂಡು ಸಾಧಕರಾಗಿ ದೇಶ ಸೇವೆ ಮಾಡುವಂತಾಗಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನ.ಪಂ. ಸದಸ್ಯ ಹರ್ಷರಾಜ ಶೆಟ್ಟಿ, ವೈದ್ಯ ಡಾ. ಹರಿಪ್ರಸಾದ್, ಉದ್ಯಮಿ ಜಾನ್ ಕ್ವಾಡ್ರಸ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್, ನಿವೃತ್ತ ಬ್ಯಾಂಕ್ ಉದ್ಯೋಗಿ ಅಶೋಕ್ ಕುಮಾರ್ ಶೆಟ್ಟಿ,ವಾಮನ ನಡಿಕುದ್ರು, ವಾಸು ಪೂಜಾರಿ ಚಿತ್ರಾಪು, ಮುಲ್ಕಿ ರೋಟರಿ ಕ್ಲಬ್ ಮಾಜೀ ಅಧ್ಯಕ್ಷ ಶಿವರಾಮ ಜಿ.ಅಮೀನ್, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಲತಾ ಶೇಖರ್, ರಮನಾಥ ಸುವರ್ಣ, ವಕೀಲ ರವೀಶ್ ಕಾಮತ್, ರೊ. ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ನಿವೃತ್ತ ಆರೋಗ್ಯ ನಿರೀಕ್ಷಕ ವೆಂಕಟ್ರಮಣ ಗಟ್ಟಿ ರವರ ನಿಧನಕ್ಕೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
Kshetra Samachara
28/08/2022 10:18 am