ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಕುಮಾರ ಮಂಗಿಲ ದೇವಸ್ಥಾನದಲ್ಲಿ ನಿರ್ಮಾಣವಾಗಲಿರುವ ನೂತನ ಸಮುದಾಯ ಭವನಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮವು ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ಹಾಗೂ ಅರ್ಚಕ ಚಂದ್ರಶೇಖರ ಮಯ್ಯ ನೇತೃತ್ವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಅಭಿವೃದ್ಧಿ ಸರಕಾರದ ಮೂಲ ಮಂತ್ರವಾಗಿದ್ದು ಈ ಹಿನ್ನೆಲೆಯಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಸರಕಾರದಿಂದ 15 ಲಕ್ಷ ರೂಪಾಯಿ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಗೋಪಾಲಕೃಷ್ಣ ಮಯ್ಯ, ಪ್ರಸಾದ್ ಮಯ್ಯ, ದೇವಪ್ರಸಾದ್ ಪುನರೂರು,ರಾಜೇಶ್ ಖನ್ನ ಭಟ್,ಶರತ್ ಕುಬೆವೂರು, ಅತಿಕಾರಿಬೆಟ್ಟು ಗ್ರಾಮ ಅಧ್ಯಕ್ಷ ಮನೋಹರ ಕೋಟ್ಯಾನ್ , ರಾಜೇಶ್ ಅಮೀನ್ ಕಿಲ್ಪಾಡಿ, , ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಶಶೀಂದ್ರ ಮಯ್ಯ, ಶಂಕರ್ ಶೆಟ್ಟಿ ಶಿಮಂತೂರು, ಸಂಜಿತ್ ಶೆಟ್ಟಿ, ರಮೇಶ್ ಮಯ್ಯ, ಜಯಕುಮಾರ್ ಮಯ್ಯ, ಗುತ್ತಿಗೆದಾರ ಮಧುಸೂದನ್ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/08/2022 12:53 pm