ಮುಲ್ಕಿ:ಸ್ವಾತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ತಿರಂಗ ಯಾತ್ರೆ ಅಭಿಯಾನ ಸಮಿತಿ ರಚಿಸಲಾಗಿದ್ದು, ಈ ಮೂಲಕ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯಲಿದೆ, ಹರ್ ಘರ್ ತಿರಂಗಾ ಪ್ರತಿ ಮನೆಯಲ್ಲಿ ಮೂರು ದಿನಗಳ ಕಾಲ ರಾಷ್ಟ್ರ ಧ್ವಜ ರಾರಾಜಿಸಿದರೆ, ಈ ಬಾರಿ ಮುಲ್ಕಿಯಿಂದ ಮೂಡಬಿದ್ರೆ ತನಕ 100ಮೀಟರ್ ಉದ್ದದ ರಾಷ್ಟ್ರಧ್ವಜ ತಿರಂಗ ಯಾತ್ರೆ ಹೆಸರಿನೊಂದಿಗೆ ಮುಲ್ಕಿಯಿಂದ ಮೂಡಬಿದ್ರೆವರೆಗೆ ಸಾಗಲಿದೆ.
ಆ. 14ರಂದು ಬೆಳಿಗ್ಗೆ 8 ಗಂಟೆಗೆ ಕಾರ್ನಾಡು ಸದಾಶಿವ ರಾವ್ ರವರ ಹುಟ್ಟೂರು ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೆಶ್ವರೀ ಅಮ್ಮನವರ ಸನ್ನಿಧಿಯಿಂದ ಹೊರಟು ರಾಣಿ ಅಬಕ್ಕನ ಹುಟ್ಟೂರು ಮೂಡಬಿದ್ರೆವರೆಗೆ ಪಾದಯಾತ್ರೆ ಮೂಲಕ ನಡೆಯಲಿದೆ. ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ದೇಶ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು 100 ಮೀಟರ್ ಉದ್ದದ ಬಾವುಟವನ್ನು ಹಿಡಿದು ಸಾಗಲಿದ್ದಾರೆ.
ಮುಲ್ಕಿಯಲ್ಲಿ ಪ್ರಾರಂಭವಾಗುವ ಮೆರವಣಿಗೆಯಲ್ಲಿ ಮೆರವಣಿಗಯಲ್ಲಿ ಮುಂಭಾಗ ಭಾರತ ಮಾತೆಯ ಭಾವ ಚಿತ್ರ, ನಂತರ ದೇಶ ಭಕ್ತ ಕಾರ್ನಾಡು ಸದಾಶಿವ ರಾಯರ ಭಾವಚಿತ್ರ, ನಂತರ ವೀರ ರಾಣಿ ಅಬಕ್ಕ ಅವರ ಭಾವಚಿತ್ರ ಇರಲಿದೆ, ಮೆರವಣಿಗೆ ಉದ್ದಕ್ಕೂ ಬಾವುಟವನ್ನು ನೂರಾರು ದೇಶ ಭಕ್ತರು ಹಿಡಿದುಕೊಂಡು ಪಾದಯಾತ್ರೆಯ ಮೂಲಕ ಸಾಗಲಿದ್ದು, ಮೆರವಣಿಗೆಯಲ್ಲಿ ದೇಶ ಭಕ್ತಿಯನ್ನು ಬಿಂಬಿಸುವ ವಿವಿಧ ಭಜನಾ ತಂಡಗಳು, ಟ್ಯಾಬ್ಲೋ, ಚೆಂಡೆ, ಡೋಲು ಮತ್ತಿತರ ತಂಡಗಳು ಯಾತ್ರೆಗೆ ಮೆರಗು ನೀಡಲಿದೆ. ದಾರಿಯುದ್ದಕ್ಕೂ ಅಲ್ಲಲ್ಲಿ ದೇಶಭಕ್ತ ನಾಗರಿಕರಿಗೆ ಪುಷ್ಪಾರ್ಚನೆಗೈಯುವ ಅವಕಾಶವಿದೆ. ಸುಮಾರು 27 ಕಿ.ಲೋ ಮೀಟರ್ ನಡೆಯುವ ಈ ಪಾದಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಾಥ್ ನೀಡಲಿದ್ದು, ದಾರಿಯುದ್ದಕ್ಕೂ ಸಾರ್ವನಿಕರು ಅಲ್ಲಲ್ಲಿ ಪಾನೀಯ, ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಿದ್ದಾರೆ.
ಬಾವುಟವನ್ನು ಸೂರತ್ ನಲ್ಲಿ ತಯಾರಿಸಲಾಗಿದ್ದು, 100ಮೀಟರ್ ಉದ್ದ 9.3 ಅಡಿ ಅಗಲವಿದೆ.ತ್ರಿವರ್ಣ ಧ್ವಜದ ಬಾವುಟ ಸೂರತ್ ನಲ್ಲಿ ತಯಾರಾಗುತ್ತಿದ್ದು, ಕಳೆದ 15 ದಿನಗಳ ಹಿಂದೆಯೇ ಆರ್ಡರ್ ನೀಡಲಾಗಿದೆ. ಬಾವುಟ 100 ಮೀಟರ್ ಉದ್ದ 9.3 ಅಡಿ ಅಗಲವಿದ್ದು ರಾಜ್ಯದಲ್ಲೇ ಇಷ್ಟೊಂದು ಉದ್ದದ ಬಾವುಟ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ. ಈ ಬಾವುಟದ ತಯಾರಿಕೆಗೆ ಸುಮಾರು 25ಸಾವಿರ ರೂಪಾಯಿ ವೆಚ್ಚ ತಗುಲಿದೆ ಎಂದು ತಿರಂಗ ಯಾತ್ರೆ ಅಭಿಯಾನದ ಸಂಚಾಲಕ ಅಭಿಲಾಷ್ ಶೆಟ್ಟಿ ಕಟೀಲು ತಿಳಿಸಿದ್ದಾರೆ.
Kshetra Samachara
11/08/2022 10:08 am