ಮುಲ್ಕಿ: ಮುಲ್ಕಿ ರೈಲ್ವೇ ನಿಲ್ದಾಣ ಸಂಪರ್ಕಿಸುವ ಕೆಎಸ್ ರಾವ್ ನಗರ ರೈಲ್ವೇ ಮೇಲ್ಸೇತುವೆ ಕಾಂಕ್ರೀಟ್ ರಸ್ತೆಯಲ್ಲಿ ಹೊಂಡಗಳು ಉಂಟಾಗಿ ಕೆಸರುಮಯವಾಗಿದೆ. ಭಾರಿ ಮಳೆ ಬಂದರೆ ಸಾಕು ಜನನಿ ಬಿಡ ವಾಹನ ಸಂಚಾರವಿರುವ ಈ ಸೇತುವೆಯಲ್ಲಿ ಸಂಚಾರ ದುಸ್ತರವಾಗಿದೆ.
ಸೇತುವೆ ಇಕ್ಕೆಲಗಳಲ್ಲಿ ಗಿಡಗಂಟಿಗಳು ಹಾಗೂ ತ್ಯಾಜ್ಯದ ರಾಶಿ ತುಂಬಿಕೊಂಡಿದೆ.ರಸ್ತೆ ಅವ್ಯವಸ್ಥೆ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ಶಾಸಕ ಉಮಾನಾಥ ಕೋಟ್ಯಾನ್ ಗಮನಕ್ಕೆ ತಂದಿದ್ದು ಶಾಸಕರು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ.
ಕೆಎಸ್ ರಾವ್ ನಗರದ ರೈಲ್ವೇ ನಿಲ್ದಾಣದಿಂದ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಕೆಂಚನಕೆರೆ ಕುಬೆವೂರು ಬಳಿ ಸಂಪರ್ಕಿಸುವ ಈ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬಾ ತ್ಯಾಜ್ಯ ನೀರು ಹರಿಯುತ್ತಿದೆ.ಕೂಡಲೇ ಸಂಬಂಧಪಟ್ಟ ಇಲಾಖೆ ರೈಲ್ವೇ ಮೇಲ್ಸೇತುವೆ ರಸ್ತೆ ದುರಸ್ತಿ ಜೊತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
03/08/2022 12:24 pm