ಮೂಡಬಿದ್ರೆ: ದೇವಾಡಿಗರ ಸುಧಾರಕ ಸಂಘ ಶ್ರೀರಾಮಪುರ, ದೇವಾಡಿಗರ ಮಹಿಳಾ ವೇದಿಕೆ ಮತ್ತು ದೇವಾಡಿಗರ ಯುವ ವೇದಿಕೆ ಮೂಡಬಿದ್ರೆ ಜಂಟಿ ಆಶ್ರಯದಲ್ಲಿ 10ನೇ ವರ್ಷದ "ಅಟಿಡೊಂಜಿ ದಿನ" ಕಾರ್ಯಕ್ರಮ ದೇವಾಡಿಗರ ಸಮಾಜ ಭವನದಲ್ಲಿ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮೂಡಬಿದ್ರೆ ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಶಶಿಧರ ದೇವಾಡಿಗ ಶಿರ್ತಾಡಿ, ಸಾಹಿತಿ ಜಯಂತಿ ಎಸ್. ಬಂಗೇರ, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ, ಕವಿತಾ ದೇವಾಡಿಗ ಸಿದ್ಧಕಟ್ಟೆ, ಚಂದ್ರಶೇಖರ ದೇವಾಡಿಗ ಮರೋಡಿ, ಬಿಜೆಪಿ ನಾಯಕ ಜಗದೀಶ್ ಅಧಿಕಾರಿ, ಅಖಿಲಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಮೋಹನ್ ದಾಸ್ ಹಿರಿಯಡ್ಕ, ಮೂಡಬಿದ್ರೆ ದೇವಾಡಿಗ ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿ ರತ್ನಾಕರ ದೇವಾಡಿಗ, ಯುವವೇದಿಕೆ ಅಧ್ಯಕ್ಷ ಸುಮಂತ ಜೆ. ದೇವಾಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಕೃತಿಕಾ ಆಯರೆಮನೆ ರವರನ್ನು ಗೌರವಿಸಲಾಯಿತು. ಬಳಿಕ ಆಟಿಯ ಪಾರಂಪರಿಕ ತಿಂಡಿ ತಿನಸುಗಳ ಪ್ರದರ್ಶನ, ಸಮಾಜದ ಹಿರಿಯರಿಗೆ ಸನ್ಮಾನ, ಸಮಾಜ ಬಾಂಧವರಿಂದ ತುಳು ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ಮಮತಾ ಸತೀಶ್ ದೇವಾಡಿಗ ಧನ್ಯವಾದ ಅರ್ಪಿಸಿದರು. ರಮಾ ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.
Kshetra Samachara
02/08/2022 12:51 pm