ಮುಲ್ಕಿ:ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮಂತೂರು ಬಳಿಯ ಕಲ್ಲಾಪು ಕಟ್ಟ ಆಣೆಕಟ್ಟೆಯಲ್ಲಿ ಕಸಕಡ್ಡಿ, ಮರದ ದಿಮ್ಮಿಗಳು ಸಿಲುಕಿ ಇತ್ತೀಚಿಗೆ ಸುರಿದ ಭಾರೀ ಮಳೆಗೆ ಕೃತಕ ನೆರೆ ಉಂಟಾಗಿ ಸುತ್ತಮುತ್ತಲಿನ ಹಲವಾರು ಕೃಷಿ ಭೂಮಿಗೆ ಅಪಾರ ಹಾನಿ ಉಂಟಾಗಿತ್ತು.
ಭಾನುವಾರ ಶಿಮಂತೂರು ಯುವಕ ಮಂಡಲದ ಸದಸ್ಯರು ಕೃಷಿಗೆ ಪೂರಕವಾಗಿ ಶ್ರಮದಾನದ ಮೂಲಕ ಅಣೆಕಟ್ಟಿನಲ್ಲಿರುವ ಕಸ ಕಡ್ಡಿಗಳನ್ನು ಹಾಗೂ ಮರದ ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಯುವಕ ಮಂಡಲದ ಜನೋಪಯೋಗಿ ಕಾರ್ಯಕ್ರಮ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
Kshetra Samachara
31/07/2022 02:43 pm