ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ವಿಜಯ ಕಾಲೇಜು ರಸ್ತೆಯ ಕಾಲೇಜು ಗ್ರಂಥಾಲಯದ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮನೆಯವರು ಕಳೆದ ಕೆಲ ತಿಂಗಳಿನಿಂದ ಜಲ್ಲಿ ಮಿಶ್ರಿತ ಮಣ್ಣು ಹಾಕಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಮುಲ್ಕಿ ವಿಜಯ ಕಾಲೇಜು ರಸ್ತೆ ತೀವ್ರ ಇಕ್ಕಟ್ಟಾಗಿದ್ದು ರಸ್ತೆ ಬದಿಯಲ್ಲಿ ಜಲ್ಲಿ ಮಿಶ್ರಿತ ಮಣ್ಣು ಹಾಕಿದ್ದರಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ಸಂಚಾರ ದುಸ್ತರವಾಗಿದೆ.
ಈ ಬಗ್ಗೆ ಮಣ್ಣು ಹಾಕಿದವರನ್ನು ಪ್ರಶ್ನಿಸಿದರೆ ತೆರವುಗೊಳಿಸುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಆದರೆ ಮಣ್ಣನ್ನು ಇದುವರೆಗೂ ತೆರೆವು ಗೊಳಿಸಿಲ್ಲ. ಕೂಡಲೇ ಅನಾಹುತ ಸಂಭವಿಸುವ ಮೊದಲು ಮಣ್ಣನ್ನು ತೆರೆವುಗೊಳಿಸಲು ನಗರ ಪಂಚಾಯತ್ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
22/07/2022 12:32 pm