ಮುಲ್ಕಿ: ಹಳೆಯಂಗಡಿ ಸಮೀಪದ ಪಡುಪಣಂಬೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ, ಶ್ರೀ ಗಾಯತ್ರಿ ಮಹಿಳಾ ಸಮಿತಿ,ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದ ಸಮಿತಿ ವತಿಯಿಂದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಮಾಹಿತಿ, ಪುಸ್ತಕ ವಿತರಣೆ, ವಾರ್ಷಿಕ ಕ್ರೀಡೋತ್ಸವದ ಬಹುಮಾನ ವಿತರಣೆ, ಮಹಾಸಭೆ ,ಆಷಾಢ ವಿಶೇಷ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರವಿ ಆಚಾರ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಠಾಣಾ ಇನ್ಸ್ಪೆಕ್ಟರ್, ಕುಸುಮಾಧರ್ ಮಾತನಾಡಿ ಸಂಘಟನೆಗಳಲ್ಲಿ ಏಕತೆ ಇದ್ದರೆ ಯಾವುದೇ ಕಾರ್ಯಸಿದ್ಧಿ ಸಾಧ್ಯ, ವಿವಿಧ ಸಂಘಟನೆಗಳ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ಹಸ್ತ ಶ್ಲಾಘನೀಯ ಎಂದರು.
ವೇದಿಕೆಯ ಕಿರಿಯ ತರಬೇತಿ ಅಧಿಕಾರಿ ಪುರುಷೋತ್ತಮ ಎಲ್ ಆಚಾರ್ಯ, ದೈವಸ್ಥಾನದ ಕೂಡುವಳಿಕೆ ಮೊಕ್ತೇಸರ ಭುಜಂಗ ಎಚ್ ಆಚಾರ್ಯ, ಅಧ್ಯಕ್ಷರಾದ ಬಿ ಜಗದೀಶ ಆಚಾರ್ಯ, ಗೌರವಾಧ್ಯಕ್ಷ ಬಿ ಸೂರ್ಯಕುಮಾರ್, ಗಾಯತ್ರಿಮಹಿಳಾ ಮಂಡಳಿಯ ಅಧ್ಯಕ್ಷೆ ಸತ್ಯ ವಾಸುದೇವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/07/2022 12:24 pm