ಬೈಕಂಪಾಡಿ: ವರುಣನ ಆರ್ಭಟಕ್ಕೆ ತತ್ತರಿಸಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೀನಕಳಿಯ ಸುರತ್ಕಲ್ ಸಮುದ್ರ ತೀರದಲ್ಲಿರುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಕುಸಿದು ಬಿದ್ದು ಈ ಭಾಗದ ಮೀನುಗಾರರು ಪದೇ ಪದೇ ತೊಂದರೆ ಗೀಡಾಗುತ್ತಿದ್ದು ಮಾಹಿತಿ ಅರಿತ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜೀ ಶಾಸಕ ಡಾ.ಮೊಹಿಯುದ್ದೀನ್ ಬಾವ ಭೇಟಿ ನೀಡಿದರು.
ಬಾರಿ ಮಳೆಯಿಂದ ಹಾನಿಗೀಡಾದ ಸ್ಥಳಗಳನ್ನು ಪರಿಶೀಲಿಸಿ ಸ್ಥಳೀಯರಿಗೆ ಧೈರ್ಯ ತುಂಬಿ ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸದರಿ ಪ್ರದೇಶಕ್ಕೆ ರಾಜ್ಯದ ಮುಖ್ಯ ಮಂತ್ರಿಗಳನ್ನು ಕರೆಯಿಸಿ ಪರಿಸ್ಥಿತಿ ಅವಲೋಕನ ಮಾಡಿಸಬೇಕು ಎಂದು ಡಾ.ಮೊಹಿಯುದ್ದೀನ್ ಬಾವ ಸರಕಾರವನ್ನು ಒತ್ತಾಯಿಸಿದರು.
Kshetra Samachara
12/07/2022 11:09 am