ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಅಪಾಯಕಾರಿ ಹೊಂಡ ಸೃಷ್ಟಿಯಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಬಸು ನಿಲ್ದಾಣದ ಕೆಳಗಡೆ ಮಾರ್ಕೆಟ್ ರಸ್ತೆ, ಕೆನರಾ ಬ್ಯಾಂಕ್ ಒಳ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರುವ ಜಂಕ್ಷನ್ ಬಳಿ ಹೆದ್ದಾರಿ ಡಾಮರು ಕಿತ್ತು ಹೋಗಿ ಹೊಂಡ ಸೃಷ್ಟಿಯಾಗಿದ್ದು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಜಂಕ್ಷನ್ ಬಳಿ ಸರ್ವಿಸ್ ರಸ್ತೆ ಅವ್ಯವಸ್ಥೆಯಿಂದ ಅನೇಕ ಅಪಘಾತಗಳು ಸಂಭವಿಸಿದೆ.
ಕಳೆದ ದಿನದ ಹಿಂದೆ ಹೋಟೆಲ್ ಬಳಿ ಸರ್ವಿಸ್ ರಸ್ತೆ ಕಾಮಗಾರಿ ನಡೆಸಿದ್ದು ಅರ್ಧಂಬರ್ಧ ಕಾಮಗಾರಿಯಿಂದ ಹೆದ್ದಾರಿ ಬದಿಯಲ್ಲಿ ವಾಹನಗಳು ಅನಧಿಕೃತ ನಿಲುಗಡೆ ಮಾಡುತ್ತಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಕೂಡಲೇ ಹೆದ್ದಾರಿ ಇಲಾಖೆಯ ಗುತ್ತಿಗೆದಾರರು ಅಪಾಯಕಾರಿ ಹೊಂಡವನ್ನು ಮುಚ್ಚುವುದರ ಜೊತೆಗೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ ನಿಷೇಧ ಮಾಡಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
06/07/2022 01:13 pm