ಮುಲ್ಕಿ: ತಾಲೂಕು ಘಟಕದ ಅಧ್ಯಕ್ಷೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹಿಷ್ ಚೌಟ ಹೇಳಿದರು.
ಅವರು ದ.ಕ.ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ವತಿಯದ ನಡೆದ ಮಕ್ಕಳ ಕಾವ್ಯ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳ ಮೂಲಕ ಕನ್ನಡ ಸಾಹಿತ್ಯ ಮತ್ತು ಕನ್ನಡದ ಬೆಳವಣಿಗೆ ಮತ್ತು ಉಳಿವಿಗೆ ಪ್ರಯತ್ನ ನಡೆಯುತ್ತಿರುವುದು ಉತ್ತಮ ನಡೆ, ಅಂದಿನ ಶಿಶು ಕಾವ್ಯಗಳು ಉತ್ತಮ ಸಾಹಿತ್ಯದ ಜೊತೆ ಇಂದಿಗೂ ಪ್ರಸ್ತುತಿಯಾಗಿದೆ, ಸರಕಾರಿ ಶಾಲೆಯಲ್ಲಿ ಇಂತಹ ವಾತಾವರಣ ನಿರಂತರ ನಡೆಯಲಿ ಎಂದರು.
ಮುಲ್ಕಿ ಸಾಹಿತ್ಯ ಪರಿಷತ್ ನ ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ನಿವೃತ್ತ ಶಿಕ್ಷಕಿ ಸುಮತಿ ಅನಂತರಾಮ ಭಟ್, ಎಸ್.ಡಿ.ಎಂ ಸಿ ಅಧ್ಯಕ್ಷೆ ಮಲ್ಲಿಕಾ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷ ಮುದ್ದು, ಮುಖ್ಯೋಪಾದ್ಯಾಯಿನಿ ದುಲ್ಸಿನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ ನ ಅಧ್ಯಕ್ಷೆ ಗಾಯತ್ರಿ ಉಡುಪ ಅಧ್ಯಕ್ಷತೆ ವಹಿಸಿದ್ದರು.ಐರಿನ್ ಡಿಸೋಜ ಸ್ವಾಗತಿಸಿ,ಶಿಕ್ಷಕಿ ಪ್ರಮೀಳಾ ನಿರೂಪಿಸಿದರು.
Kshetra Samachara
04/07/2022 08:21 pm