ಮುಲ್ಕಿ:ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಹಾಗೂ ಸಂಜೆಯ ಬಳಿಕ ಬಿರುಸಿನ ಮಳೆಯಾಗಿದೆ. ಬಿರುಸಿನ ಮಳೆಯಿಂದ ಕೆಲವು ಕಡೆ ಹಾನಿ ಸಂಭವಿಸಿದೆ ಕೆಮ್ರಾಲ್ ಗ್ರಾ ಪಂ ವ್ಯಾಪ್ತಿಯ ಅತ್ತೂರು ಗ್ರಾಮದಲ್ಲಿ ಬಿರುಸಿನ ಮಳೆಗೆ ಯಶೋಧಾ ಎಂಬವರ ಮನೆಯ ಗೋಡೆಯು ಕುಸಿದು ಬಿದ್ದು ಹಾನಿ ಸಂಭವಿಸಿದೆ.
ಅತ್ತೂರು ಗ್ರಾಮದ ಸೀತಾರಾಮ ಆಚಾರ್ ಎಂಬವರ ಮನೆಯ ಮಾಡಿನ ಮೇಲೆ ಮರ ಬಿದ್ದು ಮಾಡಿನ ಶೀಟ್ ಸಂಪೂರ್ಣ ಹಾನಿಯಾಗಿ, ಗೋಡೆಯು ಕುಸಿದು ಹೆಚ್ಚಿನ ನಷ್ಟ ಸಂಭವಿಸಿದೆ.
ಮುಲ್ಕಿ ಕಾರ್ನಾಡು ಗ್ರಾಮದ ವನ ಭೋಜನ ಬಳಿಯ ದುರ್ಗಾ ಪ್ರಸಾದ್ ಎಂಬವರ ಮನೆಯ ಮಾಡಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹೆಚ್ಚಿನ ಹಾನಿಯಾಗಿದೆ.
ಹಾನಿಯಾದ ಸ್ಥಳಗಳಿಗೆ ಮುಲ್ಕಿ ತಾಲೂಕು ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್,ಕಂದಾಯ ನಿರೀಕ್ಷಕ ದಿನೇಶ್ ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
02/07/2022 07:23 pm