ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಸಿ ಎಸ್ ಐ ಶಾಲೆಯ 150 ವರ್ಷಗಳ ಇತಿಹಾಸವಿರುವ ಹಳೆಯ ಕಾಲದ ಕಟ್ಟಡ ಭಾರಿ ಮಳೆಗೆ ಕುಸಿತವಾಗಿದೆ.
ಕಟ್ಟಡದ ಬಳಿ ನಗರ ಪಂಚಾಯತಿಯ ಸಂತೆ ಮಾರುಕಟ್ಟೆ ಹಾಗೂ ಕೆಲ ಬೀದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು ಕಟ್ಟಡ ಕುಸಿತ ಹೊತ್ತು ಯಾರೂ ಇಲ್ಲದ ಕಾರಣ ಭಾರೀ ಅಪಾಯ ತಪ್ಪಿದೆ.
ಈ ಬಗ್ಗೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ಹಳೇ ಕಾಲದ ಕಟ್ಟಡ ಬಿದ್ದಿರುವುದು ಗಮನಕ್ಕೆ ಬಂದಿದ್ದು ಶಾಲಾ ಮುಖ್ಯಸ್ಥರಿಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
Kshetra Samachara
01/07/2022 11:06 am