ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೊಳಚಿ ಕಂಬಳ ಕಟ್ಟದಂಗಡಿ ಬಳಿ ಮಳೆಹಾನಿ ಅನುದಾನದಿಂದ ಸುಮಾರು 18 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗುವಾಗ ನದಿಯ ಕೆಸರು ಮಣ್ಣನ್ನು ಗದ್ದೆಗೆ ಹಾಕಿದ್ದಾರೆ.
ಇದೀಗ ಕಾಮಗಾರಿ ಮುಗಿದಿದ್ದು ಫಸಲು ಬೆಳೆಯುವ ಗದ್ದೆಯಲ್ಲಿರುವ ಕೆಸರು ಮಣ್ಣನ್ನು ತೆರವುಗೊಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಗುತ್ತಿಗೆದಾರರಿಗೆ ತಿಳಿಸಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ.ಈಗಾಗಲೇ ಮಳೆಗಾಲ ಶುರುವಾಗಿದ್ದು ಗದ್ದೆಯಲ್ಲಿ ಕೃಷಿ ಕಾರ್ಯ ಆರಂಭವಾಗಿದೆ.ಆದರೆ ಗದ್ದೆಯಲ್ಲಿ ಕೆಸರು ಮಣ್ಣು ತುಂಬಿರುವ ಕಾರಣ ಗದ್ದೆಯ ಮಾಲೀಕರು ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕೂಡಲೇ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ಸೂಚನೆ ನೀಡಿ ಗದ್ದೆಗೆ ಹಾಕಿರುವ ಕಾಮಗಾರಿಯ ಕೆಸರು ಮಣ್ಣನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
29/06/2022 06:51 pm