ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ನಾಯಕತ್ವ ಹಾಗೂ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ

ಸುರತ್ಕಲ್ :ಗೋವಿಂದದಾಸ ಪದವಿ ಪೂರ್ವಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಯಕತ್ವದ ಅರಿವು ಹಾಗೂ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಮತ ಹಾಕುವ ಜವಾಬ್ದಾರಿಯ ಅರಿವು ಮೂಡಿಸಲು ವಿದ್ಯುನ್ಮಾನ ಮತಯಂತ್ರದ ಮೂಲಕ ಚುನಾವಣೆಯನ್ನು ಆಯೋಜಿಸಲಾಗಿತ್ತು.

ವಾಣಿಜ್ಯ ವಿಭಾಗದಲ್ಲಿಶಶಾಂಕ್ ಸಿ ಎಸ್, ವಿಜ್ಞಾನ ವಿಭಾಗದಲ್ಲಿ ಲಿಖಿತ್ ಮತ್ತು ಕಲಾ ವಿಭಾಗದಲ್ಲಿ ಎಂ. ಲಕ್ಷ್ಮೀಕಾಂತ್ ಪ್ರಚಂಡ ಬಹುಮತಗಳಿಂದ ಆಯ್ಕೆಯಾದರು.ವಿಜ್ಙಾನ ಸಂಘದ ಕಾರ್ಯದರ್ಶಿಯಾಗಿ ರುಶಾಲ್ ಶೆಟ್ಟಿಗಾರ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ನಿಹಾದ್ ಹಾಗೂ ವಿಮಾಂಗಿ ಡಿ ಉಳ್ಳಾಲ್ ಅವರನ್ನು ನಿಯೋಜಿಸಲಾತು.

ಪ್ರಾಚಾರ್ಯರಾದ ಲಕ್ಷ್ಮೀ.ಪಿ ಶುಭಾಶಂಸನೆಗೈದರು.ಚುನಾವಣಾ ಸಾಕ್ಷರತಾ ಸಂಘದ ಮುಖ್ಯಸ್ಥರಾದ ಶುಭ. ಎಸ್. ರೈಇವರುಚುನಾವಣೆಯ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿದರು. ಉಪಪ್ರಾಚಾರ್ಯರಾದ ಸುನೀತಾ.ಕೆ, ಚುನಾವಣಾಧಿಕಾರಿ ವೆಂಕಟರಮಣ, ಉಪನ್ಯಾಸಕರಾದಡಾ| ಚೇತನಾ.ಬಿ.ಕೆ,ಚೈತ್ರಾ ಶೆಟ್ಟಿ, ಶ್ರೀಮತಿ ಶೈಲಜ ಮತ್ತಿತರರು ಉಪಸ್ಥಿತರಿದ್ದರು.ರಾಕೇಶ್ ಹೊಸಬೆಟ್ಟು ಚುನಾವಣೆಯ ನೀತಿ ಸಂಹಿತೆಯನ್ನು ತಿಳಿಸಿದರು. ವಿದ್ಯಾರ್ಥಿಕ್ಷೇಮಪಾಲಕಿ ಪಲ್ಲವಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

26/06/2022 09:46 am

Cinque Terre

2.05 K

Cinque Terre

0

ಸಂಬಂಧಿತ ಸುದ್ದಿ