ಮುಲ್ಕಿ: ಜನರ ಮನಸ್ಸು ಹಾಗೂ ಜನರನ್ನು ತಿದ್ದಿ ತೀಡುವ ಸಾಹಿತ್ಯಗಳು ಬರಬೇಕು. ಕವಿತ್ವ ಹಾಗೂ ಬರವಣಿಗೆ ನಿರಂತರ ಪರಿಶ್ರಮದ ಮೂಲಕ ಸಾಧನೆ ಮಾಡಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯುಗಪುರುಷ ಮತ್ತು ಕಥಾ ಬಿಂದು ಸಾಹಿತ್ಯ ಸಾಂಸ್ಕ್ರತಿಕ ವೇದಿಕೆ,ಕಥಾ ಬಿಂದು ಪ್ರಕಾಶನ ದ ಸಂಯುಕ್ತ ಆಶ್ರಯದಲ್ಲಿ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ನಡೆದ ಸಾಹಿತ್ಯ ಸಂಭ್ರಮ , ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್,ಕಿನ್ನಿಗೋಳಿಯ ಯುಗಪುರುಷದ ಕೆ ಭುವನಾಭಿರಾಮ ಉಡುಪ, ರಾಣಿ ಪುಷ್ಪಾಲತಾ ದೇವಿ , ಸುನೀತಾ ಪ್ರದೀಪ್ ಕುಮಾರ್ ಉಪಸ್ಥಿರಿದ್ದರು.
ಬಳಿಕ ರಾಜ್ಯ ಮಟ್ಟದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಡಾ.ಕೊಳ್ಳಪ್ಟೆ ಗೋವಿಂದ ಭಟ್ ಮಂಗಳೂರು ವಹಿಸಿದ್ದರು ರೇಮಂಡ್ ಡಿ ಕುನ್ಹಾ ತಾಕೋಡೆ ಉಪಸ್ಥಿತಿಯಲ್ಲಿ ಡಾ.ಸುರೇಶ್ ನೆಗಳಗುಳಿ,ಸುನೀತಾ ಪ್ರದೀಪ್ ಕುಮಾರ್,ಮಂಜುಶ್ರೀ ಕಾಸರಗೋಡು,ಶರತ್ ಶೆಟ್ಟಿ ಬಿಜೂರು,ಜಗದೀಶ ದೇವಾಡಿಗ ಉಪ್ಪುಂದ,ಉಮೇಶ್ ಕಾರಂತ ಮಂಗಳೂರು,ಅಶ್ವಿನಿ ಕೆ ಕೊಂಚಾಡಿ ಮತ್ತಿತರ ಕವಿ ಗೋಷ್ಟಿ ನಡೆಯಿತು.
ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ಸಹನಾ ಕಿನ್ನಿಗೋಳಿ, ವಿಧಿಶ ಮಲ್ಯ, ರತನ್ ಕಾಮತ್ ಮೂರುಕಾವೇರಿ ಅವರನ್ನು ಗೌರವಿಸಲಾಯಿತು.
ಕೃಷಿಕರಾದ ಮಲ್ಲಿಗಾರ್ಜುನ ಜಿ. ಪರಮೇಶ್ವರ ಜಿ. ಬಸವರಾಜ, ಸಮಾಜ ಸೇವೆಯಲ್ಲಿ ಎಂ. ಕೆ. ಕಟೀಲ್, ಚಿತ್ರಕಲೆಯಲ್ಲಿ ವಿ ವಿ. ರಾಘವೇಂದ್ರ, ಕೃಷಿತಜ್ಞ ನಿಂಗಾ ರೆಡ್ಡಿ , ಶಿಕ್ಷಣದಲ್ಲಿ ಬಿಂದು ಕೆ. ವಿ, ತಬಲವಾದಕಿ ಕವಿತಾ ಕಿಣಿ, ರವೀಂದ್ರ ಕಿಣಿ, ಚಿತ್ರಕಲೆ ಸಚಿದಾನಂದ ಗುಪ್ತ ರಿಗೆ ಕರ್ನಾಟಕ ಸಾಧನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿವ್ಯಾ ಮಯ್ಯರವರ ಅಂಕುರ ಕೃತಿ ಬಿಡುಗಡೆ ನಡೆಯಿತು. ಸಂಘಟಕ ಪಿ.ವಿ ಪ್ರದೀಪ್ ಕುಮಾರ್ ಪ್ರಸ್ತಾವನೆಗೈದರು. ಶಿವಪ್ರಸಾದ್ ಕೊಕ್ಕಡ ಸ್ವಾಗತಸಿದರು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
26/06/2022 09:05 am