ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು:ಉಲಮಾಗಳ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿ ಕೊಳ್ಳಲು ಜಂಇಯ್ಯತ್ತುಲ್ ಉಲಮಾ ಕರೆ

ಪುತ್ತೂರು:ಸಮಾಜಕ್ಕೆ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಯಾ ಕಾಲದಲ್ಲಿ ಸಂಧರ್ಭಕ್ಕನುಸಾರ ಸ್ಥಳೀಯ ಮಟ್ಟದಲ್ಲೇ ಜನರಿಗೆ ಮಾರ್ಗ ದರ್ಶನ ನೀಡಿ ಅವರನ್ನು ದಾರಿ ತಪ್ಪದಂತೆ ನೋಡಿ ಕೊಳ್ಳುವಲ್ಲಿ ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಧಾರ್ಮಿಕ ಪಂಡಿತರಾದ ಉಲಮಾ ವರ್ಗದ ಗೌರವಕ್ಕೆ ಚ್ಯುತಿ ಉಂಟು ಮಾಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳಿಂದ ಪ್ರತಿಯೊಬ್ಬರೂ ದೂರ ನಿಲ್ಲಬೇಕು ಎಂದು ಸಮಸ್ತ ಪುತ್ತೂರು ಜಂಇಯ್ಯತ್ತುಲ್ ಉಲಮಾ ಕರೆ ನೀಡಿದೆ.

ಸಯ್ಯಿದ್ ಪೂಕೋಯ ತಂಙಳ್ ಪುತ್ತೂರು ಅದ್ಯಕ್ಷ ತೆಯಲ್ಲಿ ಇಂದು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ಸೇರಿದ ತಾಲೂಕು ಜಂಇಯ್ಯತ್ತುಲ್ ಉಲಮಾ ಸಭೆಯಲ್ಲಿ ಈ ತೀರ್ಮಾಣ ಕೈ ಗೊಳ್ಳಲಾಯಿತು.

ಧಾರ್ಮಿಕ ಭಾಷಣ ಮಾಡುವಾಗ ಇಂದಿನ ಸೋಶೀಯಲ್ ಮೀಡಿಯಾದ ಯುಗದಲ್ಲಿ ಸುನ್ನತ್ ಜಮಾಹತಿನ ವಿರೋಧಿಗಳಿಗೆ ಆಹಾರ ಒದಗಿಸುವಂತಹ ರೀತಿಯಲ್ಲಿ ಪವಾಡದ ಹೆಸರಲ್ಲಿ ಯಾವುದೇ ಇಲ್ಲಸಲ್ಲದ ಕಥೆಗಳನ್ನು ಹಣೆದು ಜನರಿಗೆ ಗೊಂದಲವುಂಟು ಮಾಡದಿರಲು ಉಲಮಾಗಳು ವಿಶೇಷವಾಗಿ ಗಮನ ಹರಿಸ ಬೇಕೆಂದು ಎಚ್ಚರಿಸಲಾಯಿತು.

ಕೆಮ್ಮಾರ ಶಂಸುಲ್ ಉಲಮಾ ದಹವಾ ಕಾಲೇಜ್ ಅದ್ಯಕ್ಷ ಹಾಜಿ ಎಸ್ ಬಿ ದಾರಿಮಿ ಸಭೆಯನ್ನು ಉದ್ಘಾಟಿಸಿದರು.

ಉಮರ್ ದಾರಿಮಿ ಸಾಲ್ಮರ ವಿಷಯ ಮಂಡಿಸಿದರು.

ಅಬ್ಬಾಸ್ ಮದನಿ ಘಟ್ಟಮನೆ, ಅಬ್ದುಲ್ ಕರೀಂ ದಾರಿಮಿ ಕುಂಬ್ರ,ಮಜೀದ್ ದಾರಿಮಿ ಮಿತ್ತೂರು,ಹಮೀದ್ ಬಾಖವಿ ಅಮಾನ್ ಟೂರ್,ದಾವೂದ್ ಪೈಝಿ ಬೀಟಿಗೆ,ಇಸಾಕ್ ದಾರಿಮಿ ಅಜ್ಜಿಕಟ್ಟೆ,,ಅಶ್ರಪ್ ದಾರಿಮಿ ಸೆಂಟ್ಯಾರು ಅಬ್ದುರ್ರಹ್ಮಾನ್ ಫೈಝಿ ಡಿಂಬಿರಿ, ಗಫೂರ್ ಶಾಫಿ ಬಡಕೋಡಿ , ಹಸನ್ ಬಾಖವಿ ಮುಕ್ರಂಪಾಡಿ ,ಯಾಕೂಬ್ ದಾರಿಮಿ, ಹನೀಫ್ ದಾರಿಮಿ ನೆಕ್ಕಿಲಾಡಿ, ದಾವೂದ್ ಫೈಝಿ ಬೀಟಿಗೆ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.

ಬೈತುಲ್ ಮುಖದ್ದಸ್ ಮತ್ತು ಮಕ್ಕಾ ಮದೀನ ಯಾತ್ರೆ ಹೊರಟ ಪುತ್ತೂರು ಮುದರ್ರಿಸ್ ಪೂಕೋಯ ತಙಳವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ಉಸ್ತಾದ್ ಸಂಪ್ಯ ಹಮೀದ್ ದಾರಿಮಿ ಸ್ವಾಗತಿಸಿದರು.ಅಬ್ದುಲ್ ಕರೀಂ ದಾರಿಮಿ ಕುಂಬ್ರ ವಂದಿಸಿದರು.

Edited By : PublicNext Desk
Kshetra Samachara

Kshetra Samachara

21/06/2022 05:57 pm

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ