ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗರಗುಡ್ಡೆ: ಸರಕಾರದಿಂದ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳಿಗೆ ಒತ್ತು; ಉಮಾನಾಥ್

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಅಂಗರಗುಡ್ಡೆ ರಾಮಮಂದಿರದ ಬಳಿ ಸುಮಾರು 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಶ್ರಮಿಸುತ್ತಿದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭ ಕಿನ್ನಿಗೋಳಿ ಪಂಚಾಯತ್ ಮಾಜೀ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಾಜೀ ಸದಸ್ಯ ರವೀಂದ್ರ ದೇವಾಡಿಗ, ಹೇಮಲತಾ,ಮಾಜೀ ಜಿಪಂ ಸದಸ್ಯೆ ಆಶಾ ಆರ್ ಸುವರ್ಣ, ಮಾಜೀ ತಾಪಂ ಸದಸ್ಯ ದಿವಾಕರ್ ಕರ್ಕೇರ, ಅತಿಕಾರಿಬೆಟ್ಟು ಗ್ರಾಪಂ ಸದಸ್ಯ ಕೃಷ್ಣ ಅಂಗರಗುಡ್ಡೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯಿಶ್ ಚೌಟ, ಬಿಜೆಪಿ ಮುಖಂಡರಾದ ಈಶ್ವರ ಕಟೀಲು, ಭುವನಾಭಿರಾಮ ಉಡುಪ, ರಂಗನಾಥ ಶೆಟ್ಟಿ, ಕೃಷ್ಣ ಅಂಗರಗುಡ್ಡೆ, ಜೀವನ್ ಶೆಟ್ಟಿ ಅಂಗರಗುಡ್ಡೆ, ಉದ್ಯಮಿ ಸ್ಟ್ಯಾನಿ ಪಿಂಟೊ, ತಾರಾನಾಥ್ ಮತ್ತಿತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/06/2022 11:01 am

Cinque Terre

1.67 K

Cinque Terre

0

ಸಂಬಂಧಿತ ಸುದ್ದಿ