ಮುಲ್ಕಿ: ಕಿನ್ನಿಗೋಳಿ ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ನ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ ಈಶಾ ಫೌಂಡೇಶನ್ ಸದ್ಗುರು ನೇತೃತ್ವದಲ್ಲಿ "ಮಣ್ಣು ಉಳಿಸಿ" ಅಭಿಯಾನವನ್ನು ಆಚರಿಸಲಾಯಿತು.
ಅಭಿಯಾನದ ಮುಖಾಂತರ ವಿದ್ಯಾರ್ಥಿಗಳಿಗೆ ನಮ್ಮ ನೆಲದ ಮಣ್ಣಿನ ಮಹತ್ವ ಹಾಗೂ ಮಣ್ಣಿನ ರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರಗಳನ್ನು ವಿವರಿಸಲಾಯಿತು.
ಅಭಿಯಾನದಲ್ಲಿ ಜ್ಞಾನರತ್ನ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಭಾಸ್ಕರ ದೇವಸ್ಯ, ಸಂಸ್ಥೆಯ ಅಡಳಿತಾಧಿಕಾರಿ ಕೆ ರಾಘವೇಂದ್ರ ಭಟ್, ಈಶಾ ಫೌಂಡೇಶನ್ ನ ಸ್ವಯಂಸೇವಕ ಸಂದೀಪ್ ಕುಮಾರ್, ಆಕಾಶ್ ಶೆಟ್ಟಿ, ಸ್ವಾತಿ, ಸುಪ್ರೀತ್ ವಿ., ಅಜಲಶ್ರೀ ಬಾಗವಹಿಸಿದ್ದರು.
ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಅನುರಾಧ ಸಾಲ್ಯಾನ್, ದಿವ್ಯಾ ಎಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 350 ವಿದ್ಯಾರ್ಥಿಗಳು ಮಣ್ಣನ್ನು ಉಳಿಸುವ ಸಂಕಲ್ಪ ಸ್ವೀಕರಿಸಿದರು.
Kshetra Samachara
14/06/2022 03:40 pm