ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಮಿತ್ತಗುತ್ತು ಶ್ರೀ ರಾಜನ್ ದೈವ ಶ್ರೀ ದೂಮಾವತಿ - ಬಂಟ ದೈವಸ್ಥಾನದ ನೂತನ ಅನ್ನ- ದಾಸೋಹ ಕಟ್ಟಡಕ್ಕೆ ಕೊಟ್ನಾಯಗುತ್ತು ವಿರೇಂದ್ರ ಪೂಂಜ ರವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಪಡುಮನೆ ಶೇಖರ ಶೆಟ್ಟಿ, ಕೆಳಗಿನ ಮನೆ ಪ್ರಕಾಶ ಶೆಟ್ಟಿ, ಮಿತ್ತ ಗುತ್ತು ಶಿವ ಪ್ರಸಾದ ಅಜಿಲ. ಆಡಳಿತ ಮಂಡಳಿಯ ಆಧ್ಯಕ್ಷ ಬಳ್ಕುಂಜೆ ಗುತ್ತು ಮಲ್ಲಿಕ ಯಶವಂತ ಶೆಟ್ಟಿ. ಶಕುಂತಳಾ ಸುರೇಶ ಆಜಿಲ', ಕೇಸರಿ ಪಿ ರೈ, ಕೇಶವ ಶೆಟ್ಟಿ, ಅಶ್ವತ್ತಾಮ ಶೆಟ್ಟಿ, ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳದಾನಿ ಪ್ರಶಾಂತ ಅಜಿಲ ಮಿತ್ತಗುತ್ತು ಸ್ವಾಗತಿಸಿದರು.
Kshetra Samachara
09/06/2022 10:44 am