ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನ ಆಚರಣೆ ಪ್ರಯುಕ್ತ ಬ್ಯಾಂಕ್ ಆಫ್ ಬರೋಡ ಪ್ರಾಯೋಜಿತ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇನ್ನೂರು ವಿದ್ಯಾರ್ಥಿಗಳಿಗೆ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಮಂಗಳೂರು ಬ್ಯಾಂಕ್ ಆಫ್ ಬರೋಡಾ ರೀಜನಲ್ ಮ್ಯಾನೇಜರ್ ರಾಜೇಶ್ವರಿ ಪರಿಸರ ಕುರಿತು ರಸ ಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ಪ್ರಕೃತಿಯನ್ನು ಆರಾಧಿಸಿದಾಗ ನಮಗೂ ಆರೋಗ್ಯ ಸಿಗುತ್ತದೆ. ಮರ ಗಿಡ ಹಣ್ಣು ಹೂವುಗಳಿಂದ ಮನುಷ್ಯನಿಗಷ್ಟೇ ಅಲ್ಲದೆ ಹಕ್ಕಿ ಪ್ರಾಣಿ ಚಿಟ್ಟೆಗಳಿಗೂ ಪ್ರಯೋಜನವಿದೆ ಎಂದರು.
ಬ್ಯಾಂಕ್ ಆಫ್ ಬರೋಡಾ ರೀಜನಲ್ ಮ್ಯಾನೇಜರ್ ಯಶವಂತ್, ಕಟೀಲು ಶಾಖಾ ಪ್ರಬಂಧಕ ಮಹೇಶ್ ಭಟ್ ಹಾಗೂ ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುರೇಶ್ ಶೆಟ್ಟಿ ಹಾಗೂ ಹಿರಿಯ ವಿದ್ಯಾರ್ಥಿ ದುರ್ಗಾಪ್ರಸಾದ ದಿವಾಣ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ಸೋಮಪ್ಪ ಅಲಂಗಾರು ಸ್ವಾಗತಿಸಿದರು. ಪರಿಸರ ಸಂಘದ ಹರೀಶ್ ಬಿ. ಬಹುಮಾನಿತರ ಪಟ್ಟಿ ವಾಚಿಸಿದರು. ಶ್ರೀವತ್ಸ ಎಸ್. ಆರ್ ನಿರೂಪಿಸಿದರು. ರಾಜಶೇಖರ್ ವಂದಿಸಿದರು.
Kshetra Samachara
07/06/2022 07:54 pm