ಸುರತ್ಕಲ್:ಚೇಳೈರು ಗ್ರಾಮ ಪಂಚಾಯತ್ ಗೆ ಒಣಕಸ ಸಂಗ್ರಹಣಾ ವಾಹನವನ್ನು ಗ್ರಾ ಪಂ ನ 15 ನೇ ಹಣಕಾಸು ಯೋಜನೆ ಅನುದಾನ ಮತ್ತು ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ರವರ ಸಹಕಾರದಲ್ಲಿ ಸುಮಾರು 10-30 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿದ್ದು ಹಸ್ತಾಂತರ ಕಾರ್ಯಕ್ರಮ ಮಧ್ಯ ಶಾಲೆಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ! ಕುಮಾರ್ ರವರು ವಾಹನವನ್ನು ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ ಮತ್ತು ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ರವರಿಗೆ ಹಸ್ತಾಂತರ ಮಾಡಿದರು.
ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಮಂಗಳೂರು ತಾ ಪಂ ಕಾರ್ಯನಿರ್ವಹಕ ಅಧಿಕಾರಿ ಎನ್ ಜಿ ನಾಗರಾಜ್*,ತಾ ಪಂ ಮಾಜಿ ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಯಾನಂದ ಚೇಳೈರು, ಸದಸ್ಯರಾದ ಸುಧಾಕರ ಶೆಟ್ಟಿ, ರೇಖಾ,ಸುಕುಮಾರಿ,ಗಂಗಾಧರ ಪೂಜಾರಿ ಚೇಳೈರು ಕಾಲನಿ,ವಿನಯಸಾಲ್ಯಾನ್,ಸಂತೋಷ್ ಶೆಟ್ಟಿ, ಪಾರ್ವತಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
07/06/2022 04:09 pm