ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಪಂಚಮಹಲ್ ಶ್ರೀ ಮಹಾಗಣಪತಿ ದೇವಸ್ಥಾನ ವನ್ನು ಶ್ರೀ ವೆಂಕಟರಮಣ ದೇವಸ್ಥಾನ ಕ್ಕೆ ಹಸ್ತಾಂತರ

ಮುಲ್ಕಿ:ಮುಲ್ಕಿಯ ಪಂಚಮಹಲ್ ಶ್ರೀ ಮಹಾಗಣಪತಿ ದೇವಸ್ಥಾನ ವನ್ನು ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನ ಕ್ಕೆ ಹಸ್ತಾಂತರ ಪ್ರಕ್ರಿಯೆ ವಿಜ್ರಂಭಣೆಯಿಂದ ನಡೆಯಿತು.

ಪ್ರಾತಃಕಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ ನಡೆದ ಬಳಿಕ ರಿಜಿಸ್ಟ್ರಾರ್ ಆಫೀಸಿನಲ್ಲಿ ಅಧಿಕೃತವಾಗಿ ಶ್ರೀ ಮಹಾಗಣಪತಿ ದೇವಸ್ಥಾನ ವನ್ನು ಶ್ರೀ ವೆಂಕಟರಮಣ ದೇವಸ್ಥಾನದ ಹೆಸರನ್ನು ನೋಂದಣಿ ಮಾಡುವ ವಿಧಿವಿಧಾನ ನಡೆಯಿತು.

ಮದ್ಯಾಹ್ನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಾಹ್ಮಣ ಸಂತರ್ಪಣೆ,ಸಾಯಂಕಾಲ ಶ್ರೀ ಮಹಾಗಣಪತಿ ದೇವಸ್ಥಾನ ವನ್ನು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸಮರ್ಪಣೆಯ ಅಂಗವಾಗಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಜನೆ,ತಲಚೇರಿ ಕಾರ್ ಹಾಗೂ ಕರ್ನಿರೆ ಪೈ ಕುಟುಂಬಸ್ತರಿಂದ ಹಾಗೂ ಭಕ್ತಾದಿಗಳಿಂದ ಶ್ರೀ ವೆಂಕಟರಮಣ ದೇವರಿಗೆ ಹೂವು ಹಣ್ಣು ಹಾಗೂ ಇತರ ಹೊರೆಕಾಣಿಕೆ ಹಾಗೂ ಭಜನಾ ಮೆರವಣಿಗೆ ನಡೆಯಿತು.

ಬಳಿಕ ಕಾಲಭೈರವ ದರ್ಶನ, ತಿರುಪತಿ ದೇವರಿಗೆ ಕಾಣಿಕೆ ಸಮರ್ಪಣೆ, ಶ್ರೀ ದೇವರಿಗೆ ಹೂವಿನ ಪೂಜೆ ಇತ್ಯಾದಿ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ದೇವಸ್ಥಾನದ ಅರ್ಚಕರಿಂದ ಆಡಳಿತ ಮೊಕ್ತೇಸರರು, ಭಕ್ತಾದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/06/2022 06:21 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ