ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಕಾಡು:ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ನಿರಂತರ

ಮುಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಪಣಂಬೂರು ಕಾರ್ಯಕ್ಷೇತ್ರ ಹಾಗೂ ಪ್ರಾ. ಆ. ಕೇಂದ್ರ ಅತ್ತೂರು ಕೆಮ್ರಾಲ್ ಸಹಯೋಗದಲ್ಲಿ ಬಿಪಿ, ಶುಗರ್ ಟೆಸ್ಟ್, ಕೋವಿಡ್ ಲಸಿಕೆಯ ಮೊದಲನೇ ಎರಡನೇ ಹಾಗೂ ಬೂಸ್ಟರ್ ಡೋಸ್ , ಈ ಶ್ರಮ್ ಕಾರ್ಡ, ಪಾನ್ ಕಾರ್ಡ, ಎನ್. ಪಿ.ಎಸ್. ಈ ಕೆ ವೈ ಸಿ ನೋಂದಾವಣೆ ಶಿಬಿರ ಕೆರೆಕಾಡು ಶಾಲೆಯಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ಶೆಟ್ಟಿಗಾರ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ಹಮ್ಮಿಕೊಳ್ಳಲಾಗಿದ್ದು ನಿರಂತರವಾಗಿ ನಡೆಯಲಿದೆ ಎಂದರು.

ಈ ಸಂದರ್ಭ ಪಡುಪಣಂಬೂರು ಗ್ರಾಪಂ ಸದಸ್ಯ ವಿನೋದ್ ಎಸ್ ಸಾಲ್ಯಾನ್, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿದಿ ಸವಿತಾ ಶರತ್ ಬೆಳ್ಳಾಯರು,ಲೆಕ್ಕಪರಿಶೋದಕರಾದ ಶ್ವೇತ, ಸಿ ಎಸ್ ಸಿ ಕೇಂದ್ರದ ಆರತಿ, ರವಿಕಲಾ ,ಗೀತಾ ಕೊಟ್ಯಾನ್ . ಪ್ರಾ .ಆ. ಕೇಂದ್ರ ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಮಾರ್ಗರೇಟ್ ಸುದರ್ಶಿನಿ, ಸಮುದಾಯ ಆರೋಗ್ಯ ಅಧಿಕಾರಿ ಕೋಮಲ, ಆಶಾ ಕಾರ್ಯಕರ್ತೆ ವನಜ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಸುಮಾರು 58 ಸದಸ್ಯರು ಪ್ರಯೋಜನ ಪಡೆದರು.

Edited By : PublicNext Desk
Kshetra Samachara

Kshetra Samachara

24/05/2022 07:28 pm

Cinque Terre

1.28 K

Cinque Terre

0

ಸಂಬಂಧಿತ ಸುದ್ದಿ