ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಕಚ್ಚಾ ರಸ್ತೆ ಶ್ರಮಧಾನ ನಡೆಯುತ್ತಿದ್ದ ಸ್ಥಳಕ್ಕೆ ಶಾಸಕ ಭೇಟಿ;ರಸ್ತೆ ನಿರ್ಮಾಣದ ಭರವಸೆ

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗುತ್ತಕಾಡು ಮುಖ್ಯ ರಸ್ತೆಯಿಂದ ಸೇಡಿಬರೆಯ ಕೂಡು ರಸ್ತೆಯಲ್ಲಿ ಮಳೆಯಿಂದ ಮಣ್ಣು ತುಂಬಿ ನಡೆದಾಡಲು ಕಷ್ಟಸಾಧ್ಯವಾಗಿತ್ತು, ಇಲ್ಲಿನ ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿ ಕಾರ್ಯ ಮಾಡುತ್ತಿದ್ದು ಇದನ್ನು ಮನಗಂಡು ಶಾಸಕ ಉಮನಾಥ ಕೋಟ್ಯಾನ್ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿ ಕಾರಿಗಳಿಗೆ ಪಂಚಾಯತ್ ಅನುದಾನದ ಮೂಲಕ 100 ಮೀಟರ್ ಕಾಂಕ್ರೀಟ್ ರಸ್ತೆ ಹಾಗೂ ಮುಂದೆ 400 ಮೀಟರ್ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭ ತಾ.ಪಂ ಮಾಜಿ ಸದಸ್ಯ ದಿವಾಕರ ಕರ್ಕೇರಾ , ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ, ಇಂಜಿನಿಯರ್ ಅಶ್ವಿನಿ ಆರ್, ಕಂದಾಯ ಅಧಿಕಾರಿ ಚಂದ್ರಶೇಖರ್ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

20/05/2022 05:10 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ