ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ ಗ್ರಾಹಕರು, ಸದಸ್ಯರು ಸಹಕಾರ ಸಂಘದ ಆಸ್ತಿ:ವಸಂತ್ ಬೆರ್ನಾಡ್

ಮುಲ್ಕಿ:ಕೇವಲ 10 ತಿಂಗಳ ಅವಧಿಯಲ್ಲಿ ಸಂಘವು ಉತ್ತಮ ರೀತಿಯ ಸಾಧನೆ ಗೈದಿದ್ದು, ಸಂಘದ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಪ್ರಥಮ ವರ್ಷದಲ್ಲಿಯೇ ಲಾಭ ಪಡೆದಿರುವುದು ಹೆಮ್ಮೆಯ ವಿಷಯವಾಗಿದ್ದು ಗ್ರಾಹಕರು ಹಾಗೂ ಸದಸ್ಯರು ಸಹಕಾರಿ ಸಂಘದ ಆಸ್ತಿ ಎಂದು ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷರಾದ ವಸಂತ್ ಬೆರ್ನಾಡ್ ಹೇಳಿದರು.

ಅವರು ಪ್ರಿಯದರ್ಶಿನಿ ಸಹಕಾರ ಸಂಘ ಹಳೆಯಂಗಡಿ ಇದರ 2021-2022 ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು.

ಸಂಘವು 660 ಸದಸ್ಯರನ್ನು ಹೊಂದಿ, ರೂ. 26,57,000.00 ಪಾಲು ಬಂಡವಾಳ, ರೂ. 7,30,70,589.00 ಠೇವಣಿ ಹಾಗೂ ರೂ. 5,44,95,773.00 ಹೊರಬಾಕಿ ಸಾಲ ಇದ್ದು, ರೂ. 40,78,975.00 ಮೌಲ್ಯದ ಪೀಠೋಪಕರಣಗಳ ಜೊತೆಗೆ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಸದ್ರಿ ಸಾಲಿನಲ್ಲಿ ಸಂಘವು ರೂ. 14,277.00 ಲಾಭಾಂಶ ಗಳಿಸಿದ್ದು ಇದು ಸಂಘದ ಬೆಳವಣಿಗೆಗೆ ಪೂರಕವಾಗಿದೆ. ಸಂಘದ ಉಪಾಧ್ಯಕ್ಷರಾದ ಪ್ರತಿಭಾ ಕುಳಾಯಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಡಾ| ಗಣೇಶ್ ಅಮೀನ್ ಸಂಕಮಾರ್, ಗೌತಮ್ ಜೈನ್, ಶರತ್ ಶೆಟ್ಟಿ ಪಂಚವಟಿ, ಉಮಾನಾಥ್ ಜೆ. ಶೆಟ್ಟಿಗಾರ್, ಜೈಕೃಷ್ಣ, ಗಣೇಶ್ ಪ್ರಸಾದ್ ದೇವಾಡಿಗ, ಮಿರ್ಜಾ ಅಹಮ್ಮದ್, ಚಿರಂಜೀವಿ ಅಂಚನ್, ಶೆರಿಲ್ ಅಯೋನ ಐಮನ್, ಹರೀಶ್ ಎನ್. ಪುತ್ರನ್ ಸಸಿಹಿತ್ಲು, ನವೀನ್ ಸಾಲ್ಯಾನ್ ಪಂಜ, ಮೊದಲಾದವರು ಇದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ರವರು ವರದಿ ಮಂಡಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

20/05/2022 03:26 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ