ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಅವರ ಹೆತ್ತವರನ್ನು ಹೂ ಕೊಟ್ಟು ಶಾಲಾ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ಸ್ವಾಗತಿಸಿದರು.
ಪರಿಸರದ ಖಾಸಗಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಇದ್ದರೆ ಕಟೀಲು ಪ್ರೌಢಶಾಲೆಗೆ ನೂರು ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಶಿಕ್ಷಕ ಸಾಯಿನಾಥ ಶೆಟ್ಟಿ ಹೇಳಿದರು.
ಉದ್ಯಮಿ ಗಣೇಶ್ ಶೆಟ್ಟಿ, ಶಾಲೆಯ ಉಪಪ್ರಾಚಾರ್ಯ ಸೋಮಪ್ಪ ಅಲಂಗಾರು, ಪಿಯು ಕಾಲೇಜಿನ ಪ್ರಾಚಾರ್ಯೆ ಕುಸುಮಾವತಿ, ಶಿಕ್ಷಕರಾದ ರಾಜಶೇಖರ್, ಪ್ರಥ್ವೀಶ್ ಕರಿಕೆ , ಉಮೇಶ್, ಸಂತೋಷ್ ಹರೀಶ್ , ಮಾಲತಿ ರೋಹಿಣಿ ಮತ್ತಿತರರಿದ್ದರು.
Kshetra Samachara
16/05/2022 12:22 pm