ಮುಲ್ಕಿ: ಅತಿಕಾರಿಬೆಟ್ಟುವಿನ ಕವತ್ತಾರು ದೇಂದಡ್ಕ -ಪುತ್ತೂರು ಗೆಳೆಯ ಮತ್ತು ಗೆಳತಿಯರ ಬಳಗದ ಆಶ್ರಯದಲ್ಲಿ ದೇಂದಡ್ಕ-ಪುತ್ತೂರುನ ಶ್ರೀ ಮಹಾಲಿಂಗೇಶ್ವರ ದೇವಸ್ತಾನದ ವಠಾರದಲ್ಲಿ 20 ನೇ ವರ್ಷದ ಸಾಮೂಹಿಕ ಶ್ರೀ ಶನಿಪೂಜೆಯು ವಿಜ್ರಂಭಣೆಯಿಂದ ನಡೆಯಿತು.
ಪ್ರಾತಃಕಾಲ ದೇವಸ್ಥಾನದ ಅರ್ಚಕ ವೇ.ಮೂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಸಾಮೂಹಿಕ ಶನಿಪೂಜೆ ಗೆ ಚಾಲನೆ ನೀಡಲಾಯಿತು. ಬಳಿಕ ಮಧ್ಯಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರರು,ದೇಂದಡ್ಕ -ಪುತ್ತೂರು ಗೆಳೆಯ ಮತ್ತು ಗೆಳತಿಯರ ಬಳಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
14/05/2022 05:24 pm