ಮೂಡುಬಿದಿರೆ: ಸಮಾಜ ಸೇವಾ ಸಂಸ್ಥೆ ನೇತಾಜಿ ಬ್ರಿಗೇಡ್ ಹಲವಾರು ಜನರ ಕಷ್ಟಕ್ಕೆ ನೆರವಾಗಿದೆ. ಕಳೆದ ತಿಂಗಳ ಹಿಂದೆ ಉಚ್ಚಿಲದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ವೇಷ ಧರಿಸಿ ಅನಾರೋಗ್ಯಪೀಡಿತರಿಗಾಗಿ ಹಣ ಸಂಗ್ರಹ ಮಾಡಿದ್ದರು.
ಒಟ್ಟು ಮಾಡಿದ್ದ ಆ ಮೊತ್ತವನ್ನು ಅಗತ್ಯವಿರುವವರಿಗೆ ನೀಡುವ ಕೆಲಸವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಸಮ್ಮುಖದಲ್ಲಿ ಮಾಡಲಾಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ,ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್,ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ , ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್,ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯ ರಾಜೇಶ್ ನಾಯಕ್, ಸಂಸ್ಥೆಯ ಸಂಚಾಲಕ ರಾಹುಲ್ ಕುಲಾಲ್ , ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Kshetra Samachara
02/05/2022 03:01 pm