ಮೂಡುಬಿದಿರೆ: ಶಿರ್ತಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಗರ್ಭಗೃಹ ನಿರ್ಮಾಣದ ಪಾದುಕಾನ್ಯಾಸ ಹಾಗೂ ಧಾರ್ಮಿಕ ಸಭೆಯು ಮೇ. ೪ರಂದು ಪೂರ್ವಾಹ್ನ 11.00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಜರಗಲಿದೆ. ಶ್ರೀ ಕ್ಚೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನಗೈಯಲಿದ್ದಾರೆ.
ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಶಿಮುಂಜೆಗುತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಉದ್ಯಮಿಗಳಾದ ಬರೋಡ ಶಶಿಧರ ಶೆಟ್ಟಿ, ರವೀಶ್ ದೇವಾಡಿಗ, ಸತೀಶ್ ಶೆಟ್ಟಿ ಕಡಂಬಿಲ ಗುತ್ತು, ಗರೋಡಿ ಸ್ಟೀಲ್ಸ್ನ ಮನೋಜ್ ಸರಿಪಲ್ಲ, ಮುಗ್ರೋಡಿ ಕನ್‌ಸ್ಟçಕ್ಷನ್‌ನ ಸುಧಾಕರ್ ಶೆಟ್ಟಿ, ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ, ಜಗನ್ನಾಥ ಶೆಟ್ಟಿ ಚಾವಡಿಮನೆ, ಬಿ. ಚಂದ್ರಶೇಖರ ರಾವ್ ಮೂಡುಬಿದಿರೆ, ಕರ್ನಾಟಕ ಕ್ವಾರಿ ಆ್ಯಂಡ್ ಕ್ರಷರ್ ಓರ‍್ಸ್ ಅಸೋಸಿಯೇಶನ್‌ನ ಅಧ್ಯಕ್ಷ ರವೀಂದ್ರ ಶೆಟ್ಟಿ, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿರ್ತಾಡಿ, ವಾಲ್ಪಾಡಿ, ಪಡುಕೊಣಾಜೆ, ಮೂಡುಕೊಣಾಜೆ, ಮಾಂಟ್ರಾಡಿ ಗ್ರಾಮಗಳ ಸುಮಾರು 2 ಸಾವಿರ ಭಕ್ತಾಧಿಗಳು ಭಾಗವಹಿಸಲಿದ್ದಾರೆ.
ಅರ್ಜುನಾಪುರ ದೇವಸ್ಥಾನವು ಸುಮಾರು 6.5ಕೋಟಿ ರೂ. ವೆಚ್ಚದಲ್ಲಿ ಶಿಲಾಮಯಗೊಂಡು ಜೀರ್ಣೋದ್ಧಾರಗೊಳ್ಳಲಿದೆ.
Kshetra Samachara
30/04/2022 03:32 pm