ಕಾವೂರು:ಮಂಗಳೂರು ನಗರ ಉತ್ತರದ ವಾರ್ಡ್18 ಕಾವೂರಿನ ಬೋಲ್ಪ್ ಗುಡ್ಡೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಮತ್ತು ಚಂಡ ಚಾಮುಂಡೇಶ್ವರಿ ಭಜನಾ ಮಂದಿರಕ್ಕೆ ಹೋಗುವ ನೂತನ ರಸ್ತೆಯನ್ನು 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ ಮತ್ತು 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಬೋಲ್ಪ್ ಗುಡ್ಡೆಯಿಂದ ಈಶ್ವರ ನಗರಕ್ಕೆ ಹೋಗುವ ನೂತನ ರಸ್ತೆಯ ಉದ್ಘಾಟನೆಯನ್ನು ಶಾಸಕ ಡಾ. ವೈ.ಭರತ್ ಶೆಟ್ಟಿಯವರು ನೆರವೇರಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಮೂಲಕ ಜನರ ಸಮಸ್ಯೆಗೆ ಪ್ರಾಧಾನ್ಯತೆ ನೀಡುವುದಾಗಿ ತಿಳಿಸಿದರು.
ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್, ಕಾರ್ಪೋರೇಟರ್ ಸಂಗೀತಾ ನಾಯಕ್, ವಾರ್ಡಿನ ಮಂಡಲದ ಪ್ರಮುಖರು, ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
Kshetra Samachara
19/04/2022 01:45 pm