ಮೂಡುಬಿದಿರೆ: ತಾಲೂಕಿನ ಗಂಟಾಲ್ ಕಟ್ಟೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಬೈಕೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಶಿರ್ತಾಡಿಯ ಅರ್ಜುನಾಪುರ ಸಮೀಪದ ಪುಣ್ಕೆದಡಿ ನಿವಾಸಿ ರಮೇಶ್ ಪೂಜಾರಿ ಸಾವನ್ನಪ್ಪಿದ ಕೂಲಿ ಕಾರ್ಮಿಕ.
ರಮೇಶ್ ಅವರು ಗಂಟಾಲ್ ಕಟ್ಟೆಯ ಮಿನೇಜಸ್ ಅವರ ಮನೆಗೆ ಮರದ ಕೆಲಸಕ್ಕೆ ಬರುತ್ತಿದ್ದರು. ಇಂದು 10 ಗಂಟೆ ವೇಳೆಗೆ ಚಹಾ ಕುಡಿಯಲೆಂದು ಕ್ಯಾಂಟೀನ್ ಗೆ ಹೋಗಿ ಹಿಂತಿರುಗಿ ಬರುವಾಗ ರಸ್ತೆ ದಾಟುವಾಗ ವೇಣೂರು ಕಡೆಯಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದ್ದು ಆಗ ರಸ್ತೆಗೆ ಎಸೆಯಲ್ಪಟ್ಟ ರಮೇಶ್ ಅವರು ತೀವೃ ತರಹದ ಗಾಯಗಳೊಂದಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಅತೀ ವೇಗದ ಚಾಲನೆ ಹಾಗೂ ರಮೇಶ್ ಅವರು ಬೈಕ್ ಬರುತ್ತಿರುವುದನ್ನು ಗಮನಿಸಿದೆ ಸ್ಕೂಟಿಯನ್ನು ರಸ್ತೆಯಾಚೆಗೆ ತಂದಿರುವುದರಿಂದ ಕಂಟ್ರೋಲ್ ಗೆ ಸಿಗದ ಬೈಕ್ ಢಿಕ್ಕಿ ಹೊಡೆದಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
19/04/2022 12:08 pm