ಮೂಡುಬಿದಿರೆ: ಕಟೀಲು ಯಕ್ಷಗಾನ ಮೇಳದಲ್ಲಿ ಭಾಗವತಿಗೆ ಮಾಡುತ್ತಿದ್ದ ಬಲಿಪ ಪರಂಪರೆಯ ಪ್ರಸಾದ್ ಬಲಿಪ (46ವ) ಅವರು ಗಂಟಲು ನೋವಿನಿಂದ ಬಳಲಿ ಸೋಮವಾರ ನಿಧನ ಹೊಂದಿದರು.
ಭಾಗವತಿಗೆಯ ದಿಗ್ಗಜ ಮಾರೂರು ನಿವಾಸಿ ಬಲಿಪ ನಾರಾಯಣ ಭಾಗವತರ ನಾಲ್ಕನೇ ಪುತ್ರರಾಗಿರುವ ಪ್ರಸಾದ್ ಅವರು ಗಂಟಲು ನೋವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.
ಕಳೆದ 30 ವರ್ಷಗಳಿಂದ ಯಕ್ಷಗಾನದಲ್ಲಿ ಭಾಗವತಿಗೆ ಮಾಡುತ್ತಾ ಬಂದಿರುವ ಪ್ರಸಾದ್ ಅವರು ಬಲಿಪ ಪರಂಪರೆಗೆ ಸಮರ್ಥ ಉತ್ತರಾಧಿಕಾರಿಯಾಗಿದ್ದರು.ತಂದೆ ಬಲಿಪ ಭಾಗವತರು, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.
Kshetra Samachara
11/04/2022 08:18 pm