ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪದಾಧಿಕಾರಿಗಳ ಫೋಷಣೆ

ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪದಾಧಿಕಾರಿಗಳ ಫೋಷಣೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ಘಟಕದ ಸದಸ್ಯರ ಸಭೆಯು ಇತ್ತೀಚೆಗೆ ನೆರವೇರಿದ್ದು ಮೂಡುಬಿದಿರೆ ತಾಲೂಕಿನ ಪದಾಧಿಕಾರಿಗಳನ್ನು ಫೋಷಿಸಲಾಗಿದೆ.

ಅಧ್ಯಕ್ಷರಾಗಿ ಈಗಾಗಲೇ ವೇಣುಗೋಪಾಲ ಶೆಟ್ಟಿ ಕೆ. ಅವರು ನಿಯುಕ್ತಿಗೊಂಡಿದ್ದು, ಸದಾನಂದ ನಾರಾವಿ ಮತ್ತು ಡಾ.ಸುಧಾರಾಣಿಯವರು ಗೌರವ ಕಾರ್ಯದರ್ಶಿಗಳಾಗಿಯೂ, ಅಂಡಾರು ಗುಣಪಾಲ ಹೆಗ್ಡೆಯವರು ಕೋಶಾಧ್ಯಕ್ಷರಾಗಿಯೂ ಆಯ್ಕೆಗೊಂಡಿರುತ್ತಾರೆ. ಕಾರ್ಯಕಾರಿ ಸದಸ್ಯರಾಗಿ ಜಯಂತಿ ಎಸ್. ಬಂಗೇರ, ವಿಜಯಲಕ್ಷ್ಮಿ, ಕಿರಣ್ ಮಾರ್ಲ, ಎಲ್.ಜೆ.ಫೆರ್ನಾಂಡಿಸ್, ಶಿಕಾರಿಪುರ ಈಶ್ವರ ಭಟ್, ರಾಮಕೃಷ್ಣ ಶಿರೂರು, ಅಬ್ದುಲ್ ಹಮೀದ್ ಪಕಲಡ್ಕ, ಶ್ರೀನಿವಾಸ ನಾಯಕ್, ಗುರು ಎಂ.ಪಿ, ಶಶಿಕಲಾ ಎನ್, ಮಹಾದೇವ ಮೂಡುಕೊಣಾಜೆ, ಪ್ರಸಾದ ಶೆಟ್ಟಿ, ಡಾ| ಪದ್ಮನಾಭ ಶೆಣೈ ಮತ್ತು ಡಾ.ಯೋಗೀಶ್ ಕೈರೋಡಿಯವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ ಹಾಗೂ ಮೂಡುಬಿದಿರೆ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವರಾಜು ಅವರು ಪದನಿಮಿತ್ತ ಸದಸ್ಯರಾಗಿರುತ್ತಾರೆ ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Edited By : PublicNext Desk
Kshetra Samachara

Kshetra Samachara

08/04/2022 12:45 pm

Cinque Terre

1.42 K

Cinque Terre

0

ಸಂಬಂಧಿತ ಸುದ್ದಿ