ಮೂಡುಬಿದಿರೆ: ತಾಲೂಕಿನ ಸುಭಾಷ್ ನಗರದ ವೃದ್ಧೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಜನನಿ ಸೇವಾ ಟ್ರಸ್ಟ್ ನ ಸದಸ್ಯರು ಸೇರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಇಂದು ಸೇರಿಸಿದರು.
ಗಿರಿಜಾ ಪೂಜಾರಿ ಎಂಬ ಹೆಸರಿನ ಮಹಿಳೆಯು ಅನಾಥರಾಗಿದ್ದು ಒಂಟಿ ಜೀವನ ನಡೆಸುತ್ತಿದ್ದರು. ಇವರು ಕಳೆದ ಹತ್ತು ದಿನಗಳ ಹಿಂದೆ ಮನೆಯಲ್ಲೇ ಕಾಲುಜಾರಿ ಬಿದ್ದು ಏಟಾಗಿದ್ದು, ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರದ ಮಾಹಿತಿ ಪಡೆಯಲು ಲಭ್ಯವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಬೇಕಾದ ಅಗತ್ಯತೆ ಇತ್ತು. ಮಾಹಿತಿ ಅರಿತ ಮೂಡುಬಿದಿರೆಯ ಪ್ರತಿಷ್ಠಿತ ಜನನಿ ಸೇವಾ ಟ್ರಸ್ಟ್ ಪ್ರಮುಖರು ಕೂಡಲೇ ಸ್ಪಂದಿಸಿ ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು.
ಸದ್ಯ ಕಾಲಿನ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಎದುರಾಗಿದ್ದು ಆಸ್ಪತ್ರೆಯಲ್ಲಿ ರೋಗಿಯ ಕಡೆಯವರ ಉಪಸ್ಥಿತಿ ಬೇಕಾಗಿತ್ತು. ಜನನಿ ಸೇವಾ ಟ್ರಸ್ಟ್ ಮೂಲಕ ಓರ್ವ ಮಹಿಳೆಯನ್ನು ಆ ಅನಾಥ ವೃದ್ಧೆಯ ಪಾಲಕಿಯಾಗಿ ನೋಡಿಕೊಳ್ಳಲು ಒಬ್ಬರನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
Kshetra Samachara
05/04/2022 05:06 pm