ತಮಿಳುನಾಡು: ಇಲ್ಲಿನ ಕನ್ಯಾಕುಮಾರಿಯಲ್ಲಿ ವುಶು ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ತಮಿಳುನಾಡು ವುಶು ಅಸೋಸಿಯೇಷನ್ ನೂರುಲ್ ಇಸ್ಲಾಂ ಉನ್ನತ ಶಿಕ್ಷಣ ಕೇಂದ್ರದ ವತಿಯಿಂದ 21ನೇ ಸಬ್ ಜೂನಿಯರ್ ರಾಷ್ಟ್ರೀಯ ವುಶು ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಅವ್ನಿ ಎನ್.ಎಮ್ ಸಬ್ ಜೂನಿಯರ್ ಬಾಲಕಿಯರ 45 ಕೆ.ಜಿ ವಿಭಾಗ ಮತ್ತು ಅನ್ಶಿ ಎನ್.ಎಮ್ ಸಬ್ ಜೂನಿಯರ್ ಬಾಲಕಿಯರ 48 ಕೆ.ಜಿ ವಿಭಾಗವು ಸ್ಯಾನ್ಸೋ (ಪೈಟಿಂಗ್ ) ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಈ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ದೊರೆತ ಒಟ್ಟು 3 ಕಂಚಿನ ಪದಕಗಳಲ್ಲಿ 2 ಪದಕಗಳು ಲಭಿಸಿವೆ. ಕರ್ನಾಟಕದಲ್ಲಿ ಈ ಕ್ರೀಡೆಯಲ್ಲಿ ಮೊದಲ ಬಾರಿಗೆ ಒಂದು ಜಿಲ್ಲೆಗೆ 2 ಪದಕಗಳು ಲಭಿಸಿದೆ.
ಇವರು ಜಿಲ್ಲೆಯ ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ಇದರ ವಿದ್ಯಾರ್ಥಿಗಳಾಗಿದ್ದು ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ನಿರಂಜನ್ ಮುಡಿಪು ಮತ್ತು ಸ್ವರ್ಣ ಇವರ ಅವಳಿ ಪುತ್ರಿಯರಾಗಿದ್ದಾರೆ.
Kshetra Samachara
01/04/2022 10:47 am