ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಹತ್ತು ಸಾವಿರ ನಗದು ಎಗರಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಸೆರೆ

ಮೂಡುಬಿದಿರೆ: ಇಲ್ಲಿನ ನಾಗರಕಟ್ಟೆ ರಸ್ತೆ ಪಕ್ಕದ ಕಟ್ಟಡದಲ್ಲಿರುವ ಟೈಲರ್ ಶಾಪ್‌ಗೆ ನುಗ್ಗಿ ಟೈಲರ್‌ಗೆ ಹಲ್ಲೆ ನಡೆಸಿ ರೂ. ಹತ್ತು ಸಾವಿರ ನಗದು ಎಗರಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಪುತ್ತಿಗೆ ಗ್ರಾಮದ ಸಂಪಿಗೆ ನಿವಾಸಿ ಶಶಿಧರ್ (30)ಎಂದು ಗುರುತಿಸಲಾಗಿದೆ. ಈತ ಕೆಲವು ಸಮಯ ಮುಂಬಯಿಯಲ್ಲಿ ಕೆಲಸ ಮಾಡಿಕೊಂಡಿದ್ದು ಇತ್ತೀಚೆಗೆ ಊರಿಗೆ ಮರಳಿದ್ದ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ತನ್ನ ಸ್ನೇಹಿತನ ಜತೆ ಬೈಕ್‌ನಲ್ಲಿ ಬಂದ ಆರೋಪಿ ವ್ಯಕ್ತಿಯೊಬ್ಬರ ಹೆಸರು ಕೇಳಿಕೊಂಡು ಟೈಲರ್ ರಮೇಶ್ ರಾವ್ ಅಂಗಡಿಗೆ ಬಂದಿದ್ದರು.

ಆಗಷ್ಟೆ ಅಂಗಡಿಗೆ ಬಂದಿದ್ದ ರಮೇಶ್‌ಗೆ ಇಬ್ಬರು ಸೇರಿ ಹಲ್ಲೆ ನಡೆಸಿ ಆತನ ಬಳಿಯಿದ್ದ ರೂ 10 ಸಾವಿರ ನಗದು ಕಸಿದುಕೊಂಡು ಪರಾರಿಯಾಗಿದೆ. ಬುಧವಾರ ರಾತ್ರಿ ಕರ‍್ಯಾಚರಣೆ ನಡೆಸಿದ ಪೊಲೀಸರು ಶಶಿಧರ್ ಎಂಬವರನ್ನು ಬಂಧಿಸಿದ್ದು ಆತನ ಸ್ನೇಹಿತ ಅಶ್ವತ್ಥಪುರದ ವ್ಯಕ್ತಿಗಾಗಿ ಶೋಧ ಕರ‍್ಯ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗೆ ಕೋರ್ಟ್ ಎರಡು ವಾರಗಳ ನ್ಯಾಯಾಂಗ ಬಂಧನ ನೀಡಿದೆ. ಆರೋಪಿ ವಿರುದ್ಧ ಮೂಡುಬಿದಿರೆ ಪೊಲೀಸ್‌ಠಾಣೆಯಲ್ಲಿ ಈ ಹಿಂದೆ ಎರಡು ಕ್ರಿಮಿನಲ್ ಪ್ರಕರಣ ದಾಖಲಾಗಿತ್ತೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

01/04/2022 08:41 am

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ