ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಸರಕಾರಿ ಶಾಲೆಗಳ ಸಂಬಳವನ್ನು ಸರಕಾರ ಅಚ್ಚುಕಟ್ಟಾಗಿ ನಿರ್ವಹಿಸಬೇಕು: ಅಭಯಚಂದ್ರ ಜೈನ್

ಮೂಡುಬಿದಿರೆ: ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿರಾಜ ಕಾಲೋನಿ, ಪುಚ್ಚಮೊಗರು ಇದರ ಶಾಲಾ ರಜತ ಮಹೋತ್ಸವದಲ್ಲಿ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯಿಂದ ಕನ್ನಡ ಮಾಧ್ಯಮ ಶಾಲೆಗಳು ನೆಲಕಚ್ಚಿ ಹೋಗಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಾಗಿ ಆಂಗ್ಲಮಾಧ್ಯಮ ಶಾಲೆಯತ್ತ ವಾಲುತ್ತಿದ್ದಾರೆ.

ಇದರಿಂದ ಶಿಕ್ಷಕರ ವರ್ಗವಣೆಯಾಗುತ್ತಿದೆ. ಸರಕಾರಿ ಶಾಲೆಗಳ ಸಂಬಳ ವ್ಯವಸ್ಥೆಯನ್ನು ಸರಕಾರ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಖಾಸಗಿ ಶಾಲೆಯಲ್ಲಿ ಸಿಗುವ ವೇತನ ಸರಕಾರಿ ಶಾಲೆಯ ಪ್ರಾಧ್ಯಾಪಕರಿಗೆ ಸಿಗುತ್ತಿಲ್ಲ. ಕನ್ನಡ ಮಾಧ್ಯಮವನ್ನು ಉಳಿಸಿ ಇಂತಹ ಶಾಲೆಗಳಿಗೆ ಜೀವ ತುಂಬುವಂತಹ ಕೆಲಸ ಗ್ರಾಮಸ್ಥರಿಂದ ಆಗಬೇಕು. ಇಲ್ಲಿ ಬಹುತೇಕ ಕೃಷಿ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿಕೊಂಡರು.

Edited By : PublicNext Desk
Kshetra Samachara

Kshetra Samachara

27/03/2022 08:50 am

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ