ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾ. ಅರ್ಚನಾ ಪ್ರಭಾತ್‌ಗೆ ರಾಷ್ಟçಮಟ್ಟದ ಎಕ್ಸ್ಲೆನ್ಸ್ ಪ್ರಶಸ್ತಿ

ಮೂಡುಬಿದಿರೆ: ಇಂಡಿಯನ್ ಅಸೋಸಿಯೇಷನ್ ಫಾರ್ ಪೇರೆಂಟರಲ್ ಆ್ಯಂಡ್ ಎಂಟರಲ್ ನ್ಯೂಟ್ರಿಷನ್ (ಐಎಪಿಇಎನ್) ವತಿಯಿಂದ ನ್ಯೂಟ್ರಿಷನ್ ಕ್ಷೇತ್ರದಲ್ಲಿನ ಕೊಡುಗೆ ಹಾಗೂ ಸಂಶೋಧನೆಗೆ ನೀಡಲಾಗುವ ರಾಷ್ಟ್ರಮಟ್ಟದ ಎಕ್ಸಲೆ‌ನ್ಸ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಪಡೆದಿದ್ದಾರೆ. ದೆಹಲಿಯ ಏಮ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಂಡಿಯನ್ ಅಸೋಸಿಯೇಷನ್ ಫಾರ್ ಪೇರೆಂಟರಲ್ ಆ್ಯಂಡ್ ಎಂಟರಲ್ ನ್ಯೂಟ್ರಿಷನ್ (ಐಎಪಿಇಎನ್) ಸಂಸ್ಥೆಯು ನ್ಯೂಟ್ರಿಷನ್ ಕ್ಷೇತ್ರದ ಕ್ಲಿನಿಕಲ್ ಸಂಶೋಧನೆ, ಉನ್ನತ ಶಿಕ್ಷಣ, ಕ್ಲಿನಿಕಲ್ ಕೇರ್ ಮತ್ತು ಗುಣಮಟ್ಟವನ್ನು ಉತ್ತೇಜಿಸುವ ರಾಷ್ಟ್ರೀಯ ಸಂಘಟನೆಯಾಗಿದೆ. ಡಾ. ಅರ್ಚನಾ ಪ್ರಭಾತ್ ಅವರು ಆಳ್ವಾಸ್ ಸಂಸ್ಥೆಯಲ್ಲಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವಿಭಜಿತ ದ.ಕ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ಕೋರ್ಸ್ ಆರಂಭಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಇತ್ತೀಚೆಗೆ ಆರಂಭಗೊಂಡ ಐಎಪಿಇಎನ್ ಮಂಗಳೂರು ಚಾಪ್ಟರ್‌ನ ಪ್ರಾದೇಶಿಕ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

26/03/2022 05:13 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ