ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಮತ್ತು ಮುಲ್ಕಿ ವಿಜಯ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ“ಭಾರತೀಯ ಸಶಸ್ತ್ರ ಪಡೆಗಳನ್ನು ಸೇರವುದರ ಬಗ್ಗೆ ಮಾಹಿತಿ ಕಾರ್ಯಾಗಾರ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲರದ ಡಾ. ಶ್ರೀಮಣಿ ಶೆಟ್ಟಿ, ವಹಿಸಿದ್ದರು
ಸಂಪನ್ಮೂಲ ವ್ಯಕ್ತಿಗಳಾದ ಭಾರತೀಯ ಭೂ ಸೇನೆಯ ನಿವೃತ್ತ ಜೂನಿಯರ್ ಕಮಿಷನ್‌ಡ್ ಆಫೀಸರ್ ಸುರೇಶ್ ಶೆಟ್ಟಿ, ಹೊಸಬೆಟ್ಟು,ನಿವೃತ್ತ ಭಾರತೀಯ ವಾಯುಸೇನಾ ಯೋಧ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ, ಬಾಳ, ಭಾರತೀಯ ನೌಕಾಪಡೆಯ ನಿವೃತ್ತ ಚೀಫ್ ಆಫೀಸರ್ ಎಂ.ಸಿ. ಬದ್ರಯ್ಯ,ರವರು ಭಾರತೀಯ ಸೇನೆಗಳನ್ನು ಸೇರುವುದರ ಕುರಿತು ಮಾಹಿತಿ ನೀಡಿ ಸೇನೆ ಸೇರುವುದರ ಮೂಲಕ ರಾಷ್ಟ್ರ ರಕ್ಷಣೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಜಿತೇಂದ್ರ, ವಿ.ರಾವ್,ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಮೋಹನ್ ದಾಸ್, ಅಧ್ಯಕ್ಷ ಸಂತೋಷ್ ದೇವಾಡಿಗ, ಸ್ಪೋರ್ಟ್ಸ್ ಕ್ಲಬ್ ನ ಮಹಿಳಾ ಕಾರ್ಯಧ್ಯಕ್ಷೆ ಶೋಭಾ. ವಿ. ಅಂಚನ್ ಉಪಸ್ಥಿತರಿದ್ದರು.ಶಿಬಿರದ 60 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು, ನಿವೃತ್ತ ಯೋಧ ಲೀಲಾಧರ್ ಕಡಂಬೋಡಿ, , ಪದಾಧಿಕಾರಿಗಳು, ಸದಸ್ಯರು ಹಾಗೂ ಸದಸ್ಯೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಕೋಶಾಧಿಕಾರಿ ಸಂಪತ್ ದೇವಾಡಿಗ ಧನ್ಯವಾದ ಅರ್ಪಿಸಿದರು, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
19/03/2022 09:41 am