ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಣಂಬೂರು: ಶೀಘ್ರ ಚಿತ್ರಾಪುರ ಮೀನುಗಾರಿಕಾ ಜೆಟ್ಟಿ ಆರಂಭ

ಪಣಂಬೂರು :ಕುಳಾಯಿ ಬಳಿಯ ಚಿತ್ರಾಪುರ ಮೀನುಗಾರಿಕಾ ಜೆಟ್ಟಿ ಕಾಮಗಾರಿ ಎರಡು ತಿಂಗಳಲ್ಲಿ ಆರಂಭವಾಗಲಿದ್ದು ಎರಡು ವರ್ಷದಲ್ಲಿ ಪೂರ್ಣವಾಗಲಿದೆ, ಕಾಮಗಾರಿ ವಿಳಂಬಕ್ಕೆ ಟೆಂಡರ್ ಸಲ್ಲಿಸಿದ್ದ ಗುತ್ತಿಗೆ ದಾರರೊಬ್ಬರು ಹೈಕೋಟ್ ಮೆಟ್ಟಿಲೇರಿವುದು ಕಾರಣ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ ವಿ ಅಕ್ಕರಾಜು ಹೇಳಿದರು.

ಅವರು ಎನ್‌ಎಂಪಿಟಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು ಎನ್‌ಐಟಿಕೆ ಟೋಲ್ ಗೂ ಎನ್‌ಎಂಪಿಟಿಗೂಯಾವುದೇ ಸಂಬಂಧ ವಿಲ್ಲ ಎಂದರು.

ಕೇಂದ್ರ ರಾಜ್ಯಗಳ 16 ಇಲಾಖೆಗಳು ಒಂದೇ ವೇದಿಕೆ ವ್ಯಾಪ್ತಿಗೆ ಎನ್ ಎಂಪಿಟಿ ಇನ್ನು ಎನ್‌ಎಂಪಿಟಿ ಪ್ರಾಧಿಕಾರವಾಗಿ ಪರಿವರ್ತನೆಯಾಗಲಿದೆ ಈ ಬಗ್ಗೆ ಆಧ್ಯಾದೇಶಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ಪ್ರಧಾನ ಮಂತ್ರಿಗಳ ಗತಿ ಶಕ್ತಿ ಯೋಜನೆ ಎಂಬ ಹೊಸ ಯೋಜನೆ ರೂಪಿಸಲಾಗಿದೆ ಇದರ ವ್ಯಾಪ್ತಿಗೆ ಕೇಂದ್ರ ರಾಜ್ಯ ಸರ್ಕಾರಗಳ ಒಟ್ಟು 16 ಇಲಾಖೆಗಳು ಒಳಪಡಲಿವೆ.ಭಾರತ್ ಮಾಲಾ ಸಾಗರ್ ಮಾಲಾ , ಒಳನಾಡು ಸಾರಿಗೆ, ಡ್ರೈ ಲ್ಯಾಂಡ್ ಬಂದರುಗಳು, ಉಡಾನ್ ಎಸ್‌ಇಝಡ್ ಕ್ಲಸ್ಟರ್ ಫರ್ಮಾಸ್ಯುಟಿಕಲ್ ಕ್ಲಸ್ಟರ್ ಇಲೆಕ್ಟ್ರಿಕ್ ಪಾರ್ಕ್ಕೈ ಗಾರಿಕಾ ಕಾರಿಡಾರ್, ಫಿಶಿಂಗ್ ಕ್ಲಸ್ಟರ್ ಕೃಷಿ ವಲಗಳುಪಿಎಂ ಗತಿ ಶಕ್ತಿ ಯೋಜನೆ ವ್ಯಾಪ್ತಿಗೆ ಬರಲಿವೆ ಎನ್‌ಎಂಪಿಟಿ ನಲ್ಲಿ ಬೃಹತ್ ಪ್ರಮಾಣದ ಯೋಜನೆಗಳು ಬರಲಿದ್ದು,ಎನ್‌ಎಂಪಿಟಿ ಆಸ್ಪತ್ರೆಯನ್ನು ಪಿಪಿಎ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ ಎಂದರು.

ಎನ್ ಎಂಪಿಟಿ ಉಪಾಧ್ಯಕ್ಷ ಕೆಜಿ ನಾಥ್ ಅಧಿಕಾರಿಗಳು, ಬಂದರದ ಬಳಕೆ ದಾರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

09/03/2022 06:16 am

Cinque Terre

990

Cinque Terre

0

ಸಂಬಂಧಿತ ಸುದ್ದಿ