ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ತಂಡವು ಗೆಲುವು ಸಾಧಿಸಿತು.
ಮಿಜಾರಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಫೈನಲ್‌ನಲ್ಲಿ, ಆಳ್ವಾಸ್ ತಂಡವು ಪುತ್ತೂರಿನ ವಿವೇಕಾನಂದ ಕಾಲೇಜನ್ನು 25-12 ಮತ್ತು 25-16 ನೇರ ಸೆಟ್‌ಗಳಿಂದ ಮಣಿಸಿತು.
ಆಳ್ವಾಸ್‌ನ ಅನುಷಾ ಕೆ ಆಕರ್ಷಕ ಎಸೆತಗಾರರಾಗಿ, ಭಾವನ ಬಿ.ಕೆ. ಉತ್ತಮ ಹಿಡಿತಗಾರ್ತಿಯಾಗಿ, ವಿವೇಕಾನಂದ ಕಾಲೇಜಿನ ಅನುಶ್ರೀ ಆಲ್‌ರೌಂಡರ್ ಆಗಿ ಹೊರಹೊಮ್ಮಿದರು. ಸೆಮಿ ಫೈನಲ್ ಹಂತದಲ್ಲಿ, ಆಳ್ವಾಸ್ ಕಾರ್‌ಸ್ಟ್ರೀಟ್ ಕಾಲೇಜನ್ನು ಮತ್ತು ವಿವೇಕಾನಂದ ಕಾಲೇಜು ತಂಡವು ಎಂ.ಸ್. ಆರ್.ಎಸ್. ಶಿರ್ವ ಕಾಲೇಜು ತಂಡವನ್ನು ಸೋಲಿಸಿ ಜಯಭೇರಿ ಭಾರಿಸಿತು.
Kshetra Samachara
08/03/2022 07:18 pm