ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಟೋಲ್ ವಿರುದ್ಧ ಧರಣಿ ಕುಳಿತಿದ್ದ ಆಸಿಫ್ ಆಪತ್ಬಾಂಧವ ಅರೆಸ್ಟ್ !

ಸುರತ್ಕಲ್:ಕಳೆದ ಹದಿನಾಲ್ಕು ದಿನಗಳಿಂದ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಪ್ರತಿಭಟನೆಯಲ್ಲಿ ಅಹೋರಾತ್ರಿ ಧರಣಿ ಕುಳಿತಿದ್ದ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪದ್ಬಾಂಧವ ಅವರನ್ನು ಹಾಗೂ ಸ್ಥಳದಲ್ಲಿದ್ದ ಇತರ ಮೂರು ಮಂದಿಯನ್ನು ಸೋಮವಾರ ಮಧ್ಯಾಹ್ನ ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ತಡರಾತ್ರಿ ಧರಣಿ ವೇದಿಕೆಗೆ ನುಗ್ಗಿದ ಮಂಗಳಮುಖಿಯರು ಅವಾಚ್ಯ ಶಬ್ದಗಳಿಂದ ಬೈದು ವಿಕೃತಿ ತೋರಿಸಿ ಆಸಿಫ್ ಆಪತ್ಬಂಧವ ಅವರ ಮೇಲೆ ಹಲ್ಲೆ ನಡೆಸಿದ್ದರು, ಈ ಬಗ್ಗೆ ಆಸಿಫ್ ರವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಪ್ರಕರಣದಲ್ಲಿ ಆರು ಮಂದಿ ಮಂಗಳಮುಖಿಯರ ಬಂಧನ ಕೂಡ ನಡೆದಿತ್ತು, ಅಲ್ಲದೆ ಮಂಗಳಮುಖಿಯರು ಆಸೀಫ್ ಅವರ ವಿರುದ್ಧ ಕೂಡ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸೋಮವಾರ ಧರಣಿ ವೇದಿಕೆಯಲ್ಲಿ ಪ್ರತಿಭಟನೆ ನಿರತರಾಗಿದ್ದ ಆಸೀಫ್ ಆಪತ್ಬಾಂಧವ, ಅಶೀರ್, ಶಾಹಿದ್ ಹಾಗೂ ಸಂತೋಷ್ ಎಂಬುವವರನ್ನು ಪೊಲೀಸರು ಬಂಧಿಸಿ ವೇದಿಕೆ ಮತ್ತು ಸ್ಥಳದಲ್ಲಿದ್ದ ವಾಹನಗಳನ್ನು ವಶಪಡಿಸಿ ಕೊಂಡಿರುತ್ತಾರೆ.

ಪೊಲೀಸರು ಬಂಧಿಸುವ ವೇಲೆ, ಇದು ನನ್ನ ಬಂಧನವಲ್ಲ, ಮುಂದಿನ ಉಗ್ರ ರೀತಿಯ ಹೋರಾಟದ ಪ್ರಾರಂಭ, ಸಾರ್ವಜನಿಕರೆಲ್ಲರೂ ನನಗೆ ಸಹಕಾರ ನೀಡಬೇಕು ಎಂದು ಕರೆ ಕೊಟ್ಟಿದ್ದಾರೆ.

Edited By : PublicNext Desk
Kshetra Samachara

Kshetra Samachara

21/02/2022 04:41 pm

Cinque Terre

1.77 K

Cinque Terre

1

ಸಂಬಂಧಿತ ಸುದ್ದಿ