ಸುರತ್ಕಲ್:ಕಳೆದ ಹನ್ನೆರಡು ದಿನಗಳಿಂದ ಎನ್ಐಟಿಕೆ ಟೋಲ್ ಗೇಟ್ ಸ್ಥಗಿತಗೊಳಿಸಬೇಕೆಂದು ಅಹೋರಾತ್ರಿ ಧರಣಿ ಶನಿವಾರ ಹದಿಮೂರನೇ ದಿನಕ್ಕೆ ಮುಂದುವರೆದಿದೆ, ಮಂಗಳಮುಖಿಯರು ನೀಡಿದ ದೂರಿನ ಆಧಾರದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆಸಿಫ್ ಆಪದ್ಬಾಂಧವ ವಿರುದ್ಧ ಜಾಮೀನುರಹಿತ ಮೊಕದ್ದಮೆ ದಾಖಲಾಗಿದೆ.
ಈ ಕುರಿತು ಪೊಲೀಸರು ಸುರತ್ಕಲ್ ಠಾಣೆಗೆ ಹಾಜರಾಗಲು ನೋಟಿಸ್ ನೀಡಿದಾಗ ನಿರಾಕರಿಸಿದ ಆಸಿಫ್ ಆಪದ್ಬಾಂಧವ, ನಾನು ಧರಣಿ ಸ್ಥಳವನ್ನು ಬಿಟ್ಟು ಎಲ್ಲಿಗೂ ಬರುವುದಿಲ್ಲ, ನೀವುಗಳು ಬೇಕಾದರೆ ನನ್ನನ್ನು ಅರೆಸ್ಟ್ ಮಾಡಿ ಎಂದಿದ್ದಾರೆ.
ಈ ಸಂದರ್ಭ ಫೇಸ್ ಬುಕ್ ಲೈವ್ ಇದ್ದುದರಿಂದ ವೀಕ್ಷಿಸುತ್ತಿದ್ದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಅಲ್ಲದೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು ಹಾಗೂ ಸಾರ್ವಜನಿಕರು ಆಸಿಫ್ ಜೊತೆ ಸಾಥ್ ನೀಡಿ ಕಾನೂನು ಚೌಕಟ್ಟಿನಲ್ಲಿ ಹೋರಾಡಲು ತೀರ್ಮಾನಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ಬ್ರಹ್ಮಾವರ ಅಧ್ಯಕ್ಷ ಫ್ರಾಂಕ್ಲಿನ್ ಡಿಸೋಜ, ಎಮ್.ಐ.ಎಫ್.ಟಿ ಕಾಲೇಜಿನ ನಿರ್ದೇಶಕರಾದ ಎಮ್.ಜಿ.ಹೆಗಡೆ, ಉದ್ಯಮಿಗಳಾದ ಸಂತೋಷ್ ಕಾಮತ್, ಐಶ್ವರ್ಯ ಶಮೀರ್, ಮುನ್ನ ಕಮ್ಮರಡಿ, ಎಮ್.ಬಿ.ಕಾನ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಮುಂತಾದವರು ಧರಣಿ ಸ್ಥಳದಲ್ಲಿ ಮಾತನಾಡಿ ಆಶಿಫ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
Kshetra Samachara
19/02/2022 04:54 pm